ಅಕ್ರಮ ಗೋಸಾಗಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶಾಸಕ ಪೂಂಜ ಮನವಿ

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾವಹತವಾಗಿ ನಡೆಯುತ್ತಿರುವ ಗೋ ಕಳ್ಳತನ, ಅಕ್ರಮ ಗೋಸಾಗಾಟ ಹೆಚ್ಚುತಿದ್ದು, ಮೇಯಲು ಬಿಟ್ಟ ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಗೋಕಳ್ಳರು ಈಗ ಬಡರೈತರ ಕೊಟ್ಟಿಗೆಗೆ ನುಗ್ಗಿ, ತಲವಾರು ಬೀಸಿ ಗೋವುಗಳನ್ನು ಅಪಹರಿಸುತ್ತಿದ್ದಾರೆ. ಇದನ್ನು ತಡೆಯಲು ಜಿಲ್ಲಾಡಳಿತ ವಿಫಲವಾಗುತ್ತಿದ್ದು, ಚಾರ್ಮಾಡಿಯಲ್ಲಿ ಅಪಘಾತಕ್ಕೀಡಾದ ವಾಹನವೊಂದರಲ್ಲಿ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾದ ಗೋವುಗಳ ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ.
ಸಾರ್ವಜನಿಕರು ಗೋಕಳ್ಳತನ ತಡೆಯುವ ಪ್ರಯತ್ನ ಮಾಡಿದಾಗ ಅವರ ಮೇಲೆ ಕೇಸು ದಾಖಲಾಗಿದೆಯೇ ಹೊರತು ಅಕ್ರಮ ಗೋಸಾಗಾಟ ನಿಲ್ಲಿಸುವ ಯಾವ ಪ್ರಯತ್ನವೂ ನಡೆದಿಲ್ಲ. ನಾಲ್ಕು ದಿನದ ಹಿಂದೆ ಗೋಕಳ್ಳರನ್ನು ಹಿಡಿದ ಪೊಲೀಸರ ಮುಂದೆ ಪಟಾಕಿ ಸಿಡಿಸಿ ಗೋವುಗಳನ್ನು ಸಾಗಿಸಿ ಪೊಲೀಸರಿಗೆ ಸವಾಲೆಸೆದ ಘಟನೆಯು ನಡೆದಿದೆ.
ಇದೇ ರೀತಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡುವ ಸಾಧ್ಯತೆ ಇದ್ದು, ಈ ಕುರಿತಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರನ್ನು ಭೇಟಿಯಾಗಿ ಗೋಕಳ್ಳತನ, ಅಕ್ರಮ ಗೋಸಾಗಾಟದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.