ಮಣಿಪಾಲ ಆರೊಗ್ಯ ಕಾರ್ಡ್ ಯೋಜನೆ: ಈ ಬಾರಿ 2 ವರ್ಷದ ಯೋಜನಾ ಅವಧಿಯೊಂದಿಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸಾಮಾನ್ಯ ಜನತೆಗೂ ಕಡಿಮೆ ವೆಚ್ಚದ ಚಿಕಿತ್ಸಾ ಸಾಲಭ್ಯ ದೊರೆಯಬೇಕು ಎಂಬ ಉದ್ದೇಶದಿಂದ 19 ವರ್ಷಗಳ ಮೊದಲು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ)ಯು ತನ್ನ ಸಾಮಾಜಿಕ ಉಪಕ್ರಮದ ಅಂಗವಾಗಿ ಮಣಿಪಾಲ ಆರೊಗ್ಯ ಕಾರ್ಡ್ ಯೋಜನೆಯನ್ನು ಪರಿಚಯಿಸಿದ್ದು, ಪ್ರಸಕ್ತ ವರ್ಷದಿಂದ ಈ ಕಾರ್ಡ್‌ನ ಅವಧಿಯು1 ವರ್ಷ ಮತ್ತು 2 ವರ್ಷಗಳಿಗೆ ಲಭ್ಯವಿದ್ದು, ಅರ್ಜಿದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕೆ.ಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸುರೇಂದ್ರ ಪ್ರಸಾದ್ ತಿಳಿಸಿದರು.

ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಜೂ.24 ರಂದು ಕರೆಯಲಾಗಿದ್ದ ಪತ್ರಿಕಾಗೊಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಅರ್ಜಿದಾರರು 2 ವರ್ಷಗಳ ಅವಧಿಯನ್ನು ಆರಿಸಿಕೊಳ್ಳುವುದರ ಮೂಲಕ ಪ್ರತೀವರ್ಷ ಇದರ ನವೀಕರಣ ಮಾಡುವುದು ತಪ್ಪುತ್ತದೆ ಹಾಗೂ ನಿರಂತರವಾಗಿ 2 ವರ್ಷಗಳ ಅವಧಿಗೆ ರಿಯಾಯಿತಿ ದರದಲ್ಲಿ ಈ ಕಾರ್ಡ್‌ನ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು.

ಮಂಗಳೂರು ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ ಲಿಮಿಟೆಡ್‌ನ ರೀಜನಲ್ ಚೀಫ್ ಅಪರೇಟಿಂಗ್ ಆಫೀಸರ್ ಸಫೀರ್ ಸಿದ್ದಿಕಿ ಮಾತನಾಡಿ, ಮಣಿಪಾಲ್ ಆರೋಗ್ಯ ಕಾರ್ಡ್ ಭಾರತದಲ್ಲೇ ಅತೀ ದೊಡ್ಡ ವಿಮಾ ರಹಿತ ಮತ್ತು ಸರ್ಕಾರೇತರ ಆರೋಗ್ಯ ಕಾಳಜಿಯ ಯೋಜನೆಯಾಗಿದೆ. ಈ ಯೋಜನೆಯು ಕರಾವಳಿ ಕರ್ನಾಟಕದಲ್ಲಿರುವ ಮಣಿಪಾಲ ಸಮೂಹದ ಆಸ್ಪತ್ರೆಗಳಾದ ಕೆಎಂಸಿ ಆಸ್ಪತ್ರೆ ಡಾ.ಬಿ ಆರ್ ಅಂಬೇಡ್ಕರ್ ವೃತ್ತ, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ ಎಂ ಪೈ ಆಸ್ಪತ್ರೆ ಉಡುಪಿ ಹಾಗೂ ಡಾ| ಟಿ.ಎಂ ಪೈ ರೊಟರಿ ಆಸ್ಪತ್ರೆ ಕಾರ್ಕಳಕ್ಕೆ ಅನ್ವಯಿಸುತ್ತದೆ. ಪ್ರಪ್ರಥಮ ಬಾರಿಗೆ ಪ್ರಸಕ್ತ ವರ್ಷದಿಂದ ಗೋವಾದಲ್ಲಿರುವ ಮಣಿಪಾಲ ಆಸ್ಪತ್ರೆಯನ್ನು ಕೂಡ ಈ ಯೋಜನೆಯಡಿಯಲ್ಲಿ ಸೇರಿಸಲಾಗಿದ್ದು, ಅತೀ ಶೀಘ್ರದಲ್ಲಿ ಕಟೀಲಿನಲ್ಲಿ ಆರಂಭಗೊಳ್ಳಲಿರುವ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆಗೂ ಅನ್ವಯಿಸಲಿದೆ. ಅಲ್ಲದೆ ಮಂಗಳೂರಿನಲ್ಲಿರುವ ಡೆಂಟಲ್ ಕಾಲೇಜುಗಳಾದ ಮಣಿಪಾಲ ಕಾಲೇಜ್ ಆಪ್ ಡೆಂಟಲ್ ಸಯನ್ಸಸ್ ಇಲ್ಲಿ ಕೂಡ ದಂತ ಚಿಕಿತ್ಸೆಯಲ್ಲಿ ರಿಯಾಯಿತಿಯನ್ನು ಪಡೆಯಬಹುದು ಎಂದರು.
ಪತ್ರಿಕಾಗೊಷ್ಠಿಯಲ್ಲಿ ಕೆ.ಎಂ.ಸಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ರಾಕೇಶ್, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಆಲ್ಬರ್ಟ್ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.