ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ  ಹೆಲ್ತಿ ಕ್ಯಾಂಪಸ್ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ‘ಜಲ ಸಂರಕ್ಷಣೆ ನಮ್ಮ ಹೊಣೆ’ ಎಂಬ ಘೋಷ ವಾಕ್ಯದೊಂದಿಗೆ ಹೆಲ್ತಿ ಕ್ಯಾಂಪಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ಇದರ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ತಾಲೂಕು ವತಿಯಿಂದ ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯ  ವಿವೇಕಾನಂದ ಸಭಾಂಗಣದಲ್ಲಿ  ಹೆಲ್ತಿ ಕ್ಯಾಂಪಸ್ ಕಾರ್ಯಕ್ರಮವನ್ನು ಜು.21ರಂದು ಹಮ್ಮಿಕೊಳ್ಳಲಾಯಿತು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶಾಹಿದ್ ಅಲಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬೆಳ್ತಂಗಡಿ ಸಿ.ಎಫ್.ಐ. ಕಾರ್ಯದರ್ಶಿ ಇಮ್ರಾನ್ ಪಾಂಡವರಕಲ್ಲು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಪರಿಸರ ಜಾಗೃತಿಯ ಮಹತ್ವ ವಿವರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಈಶ್ವರಿ, ಶಾಲಾ ಅಧ್ಯಾಪಕ ವೃಂದದವರು ,ಸಿ .ಎಫ್. ಐ ವೇಣೂರು ವಲಯದ ಅಧ್ಯಕ್ಷ ಝಾಹಿದ್ ಎಸ್ ಕೆ, ಕಾರ್ಯದರ್ಶಿ ಸಿರಾಜ್ ಎಸ್ ಕೆ ,ಕ್ಯಾಂಪಸ್ ಫ್ರಂಟ್ ನ ಅಶ್ಫಾಕ್ ,ಅಝ್ಝಾಮ್ ಹಾಗೂ ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು. ಶಾಲಾ ಪರಿಸರದಲ್ಲಿ  ಗಿಡಗಳನ್ನು ನೆಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.