ನಡ: ಇತಿಹಾಸ ಪ್ರಸಿದ್ಧ ನರಸಿಂಹಗಡ(ಗಡಾಯಿಕಲ್ಲು)ದ ಒಂದು ಭಾಗ ಕುಸಿತ

ನಡ: ಇಲ್ಲಿಯ ಇತಿಹಾಸ ಪ್ರಸಿದ್ಧ ನರಸಿಂಹಗಡ( ಗಡಾಯಿಕಲ್ಲು)ಇದರ ಕಲ್ಲಿನ ಒಂದು ಬದಿ ಬಿರುಕುಬಿಟ್ಟು ಜಾರಿ ಕೆಳಗೆ ಬಿದ್ದ ಘಟನೆ ಇಂದು(ಜೂ.24) ಮುಂಜಾನೆ 6.45ರ ಸಮಯದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಸುತ್ತಮುತ್ತಲೂ ಭಾರೀ ಧೂಳು ಆವರಿಸಿದೆ. ಕಳೆದ ಮೂರು ತಿಂಗಳಿನಿಂದ ಏರುತ್ತಿದ್ದ ಬಿಸಿಲಿನ ಪ್ರಖರತೆಗೆ ಕಲ್ಲಿನಲ್ಲಿ ಬಿರುಕುಬಿಟ್ಟು ಕುಸಿದಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲನೆ ನಡೆಸಿ, ಭೂ ಗರ್ಭ ಶಾಸ್ತ್ರ ಮತ್ತು ಗಣಿವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಕ್ತ ವರದಿ ನೀಡುವಂತೆ ಸೂಚಿಸಿದರು 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.