ರೋಗನಿರೋಧಕ ಯೋಗ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ತಾರುಣ್ಯ ಸನಿಲ್,                                                        ಎಸ್ .ಡಿ.ಎಂ.ಪತ್ರಿಕೋಧ್ಯಮ ವಿಭಾಗ ,ಉಜಿರೆ

ಜೂನ್ 21  ರಂದು  ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಯೋಗವು ಬಹಳ ಪುರಾತನ ಅಭ್ಯಾಸವಾಗಿದೆ. ಪ್ರಾಚಿನ ಪುರಾಣ ಕಾಲದಿಂದಲೂ ದೇಶದಲ್ಲಿ ಅನುಸರಿಸುತ್ತಾ ಬರಲಾಗಿದೆ. ಯೋಗ ಎಂಬುದು ನಮ್ಮ ಋಷಿಮುನಿಗಳು ಕಂಡುಕೊಂಡ ಒಂದು ಜೀವನ ಶೈಲಿ. ಅದರ ಮೂಲಕ ನಮ್ಮೊಳಗಿರುವ ಅಂತಃಶಕ್ತಿಯ ಜಾಗೃತಿ ಮತ್ತು ಅರಿವು ಮೂಡಿಸುವುದು.
“ಮಹರ್ಷಿ ಪತಂಜಲಿ”ಯವರನ್ನು ಯೋಗದ ಪಿತಾಮಹ ಎಂದು ಕರೆಯುತ್ತಾರೆ. ಯೋಗಾಭ್ಯಾಸ ನಮ್ಮ ಆರೋಗ್ಯವನ್ನು ಹೇಗೆ ವೃದ್ಧಿಸುತ್ತಿದೆ ಎಂದರೆ, ಏಕಾಗ್ರತೆಯನ್ನು ಹೆಚ್ಚು ಮಾಡಲು ಸಹಕಾರಿಯಾಗಿದೆ. ಮನಸ್ಸಿನ ಪ್ರಸನ್ನತೆಗೆ, ಮನಸ್ಸಿನ ತಳಮಳ ಕಡಿಮೆ ಮಾಡುವಲ್ಲಿ, ದೈನಂದಿನ ಚಟುವಟಿಕೆಯ ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ.
ಯಾವುದೇ ದೈಹಿಕ ತೊಂದರೆ ಇದ್ದರೂ ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಕಾಯಿಲೆಗಳು ಶಮನವಾಗುತ್ತದೆ. ಕೆಲವೊಂದು ತೊಂದರೆಗಳಿಗೆ ಕೆಲವೊಂದು ಆಸನಗಳನ್ನು ಮಾಡಬಾರದು. ಆದುದರಿಂದ ಯೋಗ ಮಾಡುವಾಗ ಸರಿಯಾದ ಮಾರ್ಗದರ್ಶನವನ್ನು ತೆಗೆದುಕೊಂಡು ಅಭ್ಯಾಸ ಮಾಡಬೇಕು. ಎಲ್ಲಾ ವಯೋಮಿತಿಯವರು ಕೂಡ ಯೋಗವನ್ನು ಮಾಡಬಹುದಾಗಿದೆ. ಯೋಗಕ್ಕೆ ವಯಸ್ಸಿನ ಮಿತಿಯಿಲ್ಲ.
ಆಧುನಿಕ ಯುಗದಲ್ಲಿ ನಾವು ಬಳಲುತ್ತಿರುವ ಅನೇಕ ಸಮಸ್ಯೆಗಳನ್ನು ಯೋಗಾಭ್ಯಾಸದಿಂದ ಗುಣಪಡಿಸಬಹುದು. ಆಧುನಿಕ ಜೀವನ ಶೈಲಿಯ ಸಮಸ್ಯೆಗಳು ನಮಗೆಲ್ಲರಿಗೂ ತಿಳಿದಿದೆ. ಜನರು ಒತ್ತಡ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಮಧುಮೇಹ ಹಾಗೂ ರಕ್ತದೊತ್ತಡದಂತಹ ಜೀವನಶೈಲಿ ಸಂಬಂಧಿತ ರೋಗ ಈಗ ಸಾಮಾನ್ಯ.
ಶಾಂತಿಯಿಲ್ಲದೆ ನರಳಾಡುತ್ತಿರುವ ಇಂದಿನ ಯುವ ಜನಾಂಗ ಔಷಧಿಯಿಂದ ಆಶ್ರಯ ಪಡೆಯುತ್ತಾರೆ. ಯೋಗಾಭ್ಯಾಸವನ್ನು ಮಾಡುವುದರ ಮೂಲಕ ಒತ್ತಡ ಹಾಗೂ ಬಹುಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದಾಗಿದೆ. ಬೆನ್ನು ನೋವು, ಅಧಿಕ ರಕ್ತದೊತ್ತಡ, ಸಂಧಿವಾತ, ಥೈರಾಯ್ಡ್ ಸಮಸ್ಯೆ, ಗ್ಯಾಸ್ಟ್ರಿಕ್, ಮನೋರೋಗ ಮುಂತಾದ ಹಲವಾರು ಕಾಯಿಲೆಗೆ ಯೋಗಾಭ್ಯಾಸ ಉಪಯುಕ್ತವಾಗಿದೆ.
ಯೋಗಾಸನ, ಇದನ್ನು ಧ್ಯಾನಕ್ಕೆ ಕುಳಿತುಕೊಳ್ಳುವ ಭಂಗಿಗಳಿಗೆ ಈ ಪದವನ್ನು ಉಲ್ಲೇಖಿಸಲಾಗುತ್ತದೆ. ಪ್ರಾಣಾಯಮ ಎಂದರೆ ಉಸಿರನ್ನು ನಿಯಂತ್ರಿಸುವುದು ಹಾಗೂ ಜೀವ ಶಕ್ತಿಯ ನಿಯಂತ್ರಿಸುವಿಕೆ ಎಂದೂ ಸಹ ಅರ್ಥೈಸಲಾಗುತ್ತದೆ.
ಸದೃಢ ಮೈಕಟ್ಟು ಮತ್ತು ಮಾನಸಿಕ ನೆಮ್ಮದಿಗೆ ಯೋಗ ಅತೀ ಉಪಯುಕ್ತ. ಅದರಲ್ಲೂ ವಿದ್ಯಾರ್ಥಿಗಳಿಗೆ ಯೋಗವು ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ನೆನಪಿನ ಶಕ್ತಿಯ ಕೊರತೆಯನ್ನು ಹೆಚ್ಚು ಅನುಭವಿಸುತ್ತಾರೆ. ಪ್ರಾಣಾಯಾಮ ಏಕಾಗ್ರತೆ ಹೆಚ್ಚಿಸಿದರೆ ಶೀರ್ಷಾಸನ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಮನೋಬಲ ವೃದ್ಧಿಸಲು , ಬುದ್ದಿಮತ್ತೆ ಮತ್ತು ಭಾವನಾತ್ಮಕತೆ ಮೇಲೆ ಯೋಗ ಸಕರಾತ್ಮಕ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ನಿವಾರಣೆ ಮತ್ತು ಸಮಚಿತ್ತ ಕಾಯ್ದುಕೊಳ್ಳಲು ಯೋಗ ಮದ್ದು.
ವ್ಯಾಯಾಮ ಮತ್ತು ಯೋಗಕ್ಕೆ ಬಹಳ ವ್ಯತ್ಯಾಸವಿದೆ. ವ್ಯಾಯಾಮ ಕೂಡ ಆರೋಗ್ಯಕ್ಕೆ ಒಳ್ಳೆಯದು. ಆದರೆ ವ್ಯಾಯಾಮದಲ್ಲಿ ಉಸಿರಾಟದ ಬಗ್ಗೆ ಗಮನವಿರುವುದಿಲ್ಲ. ಯೋಗಾಸನದಲ್ಲಿ ನಾವು ಉಸಿರಾಟದ ಬಗ್ಗೆ ಗಮನ ಕೊಡುತ್ತೇವೆ. ಉಸಿರಾಟದೊಂದಿಗೆ ಆಸನವನ್ನು ಮಾಡುತ್ತೇವೆ. ಹಾಗಾಗಿ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಯೋಗಾಸನವನ್ನು ಸೂಕ್ತ ಮಾರ್ಗದರ್ಶನ ಪಡೆದು ಉಸಿರಾಟದ ಜೊತೆಗೆ ಆಸನವನ್ನು ಅಭ್ಯಾಸ ಮಾಡುವುದು ಉತ್ತಮ.
ಯೋಗಾಭ್ಯಾಸವನ್ನು ಆಹಾರದ ನಂತರ ನಮಸ್ಕಾರದ ಮೊದಲು ಕನಿಷ್ಟ ಎರಡು ಗಂಟೆಗಳ ಅಂತರ ಇರಬೇಕು. ಸಾಮಾನ್ಯವಾಗಿ ಬೆಳಗಿನ ಜಾವ ಅಥವಾ ಸಂಜೆ ಸರಿಯಾದ ಸಮಯ . ಕೇವಲ ಒಂದು ಎರಡು ದಿನಕ್ಕೆ ಸೀಮಿತವಾಗಿಡದೆ ಪ್ರತಿದಿನವೂ ಅಭ್ಯಾಸ ಮಾಡಬೇಕು. ಯೋಗದಿಂದ ಉಪಯೋಗ ಪಡೆದುಕೊಂಡು  ಸುತ್ತಮುತ್ತಲಿನವರಿಗೂ ತಿಳಿಸುವುದು ಒಳ್ಳೆಯದು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.