ಬೆಳ್ತಂಗಡಿ: ಮಳೆಗಾಲದ ಮುಂಜಾಗೃತಾ ಕ್ರಮದ ಬಗ್ಗೆ ಶಾಸಕ ಪೂಂಜರಿಂದ ಮೆಸ್ಕಾಂ- ಅರಣ್ಯ ಇಲಾಖೆಯ ಸಮನ್ವಯ ಸಭೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮಳೆಗಾಲದ ಮುಂಜಾಗೃತಾ ಕ್ರಮ ಕೈಗೊಳ್ಳುವ ಅಂಗವಾಗಿ ತಾಲೂಕಿನ ವೇಣೂರು, ಬೆಳ್ತಂಗಡಿ, ಉಪ್ಪಿನಂಗಡಿ ವಲಯದ ಮೆಸ್ಕಾಂ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಸನಮ್ವಯ ಸಭೆಯು ಬೆಳ್ತಂಗಡಿ ಮೆಸ್ಕಾಂ ಸಭಾಂಗಣದಲ್ಲಿ ಜೂ.22 ರಂದು ಜರುಗಿತು.

ತಾಲೂಕಿನಲ್ಲೇ ಇದೇ ಮೊದಲ ಬಾರಿಗೆ ಈ ರೀತಿ ಸಮನ್ವಯ ಸಭೆ ನಡೆಸಲಾಯಿತು. ಈಗಾಗಲೇ ಮಳೆಗಾಲಕ್ಕೂ ಪೂರ್ವವಾಗಿ ಜೆಸಿಬಿ ಮಾಲಕರುಗಳ ಸಭೆ ಮಾಡಿ, ಗ್ರಾಮೀಣ ರಸ್ತೆಗಳು ಮತ್ತು ಚರಂಡಿ ದುರಸ್ತಿ ಬಗ್ಗೆ ಕ್ರಮ ಕೈಗೊಂಡಿದ್ದ ಶಾಸಕರು, ಇದೀಗ ಎರಡನೇ ಹಂತದಲ್ಲಿ ಮೆಸ್ಕಾಂ- ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಮಳೆಗಾಲದ ಅವಧಿಯಲ್ಲಿ ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯಿಂದ ಆಗಬೇಕಾದ ತುರ್ತು ಕೆಲಸ ಕಾರ್ಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.

ಅಪಾಯಕಾರಿ ಮರಗಳ ತೆರವು, ಕೆಲವೆಡೆ ರೆಂಬೆಗಳ ತೆರವಿಗೆ ಪೂರಕವಾಗಿ ಮೆಸ್ಕಾ ಇಲಾಖೆಯಿಂದ ಲೈನ್ ಆಫ್‍ ಮಾಡಿ ಕೊಡಬೇಕಾಗಿರುವ ಸಹಕಾರಗಳ ಬಗ್ಗೆ ಅವರು ವಿಚಾರ ವಿಮರ್ಷೆ ನಡೆಸಿ ಸೂಕ್ತ ನಿರ್ದೇಶನ ನೀಡಿದರು.

ಶಾಸಕ ಹರೀಶ್ ಪೂಂಜ ನಡೆಸಿದ ಈ ಸಭೆಯಲ್ಲಿ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ನೂಜೋಡಿ, ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ್, ಬೆಳ್ತಂಗಡಿ ವಲಯಾರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಹಾಗೂ ಮೆಸ್ಕಾಂ ಇಲಾಖೆಯ ಜೂನಿಯರ್ ಇಂಜಿನಿಯರ್‌ಗಳು, ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ನೀರಚಿಲುಮೆ-ವಾಣಿ ಬಳಿ ಬಾಗಿದ ಮರಗಳ ತೆರವಿಗೆ ಸೂಚನೆ
ವಾಣಿಕಾಲೇಜು ಮುಂಭಾಗ ಮತ್ತು ಉಜಿರೆ ನೀರಚಿಲುಮೆ ರಸ್ತೆಯಲ್ಲಿ ಡಾಂಬರು ರಸ್ತೆಗೆ ಬಾಗಿರುವ ಮರಗಳ ಬಗ್ಗೆ ಶೀಘ್ರ ಕ್ರಮಜರುಗಿಸುವಂತೆ ಶಾಸಕರು ಈಸಂದರ್ಭ ಸೂಚನೆ ನೀಡಿದರು.
ನೀರಿಂಗಿಸುವ ಕಾರ್ಯಕ್ರಮ ನಡೆಸಲು ಮನವಿ: ಇದೇ ಸಂದರ್ಭ ಶಾಸಕರು ಉಭಯ ಇಲಾಖೆ ಅಧಿಕಾರಿಗಳ ಜೊತೆ ಮನವಿ ಸಲ್ಲಿಸಿ, ನಿಮ್ಮ ನಿಮ್ಮಇಲಾಖೆ ವ್ಯಾಪ್ತಿಯಲ್ಲಿ ನೀರಿಂಗಿಸುವ ಬಗ್ಗೆ ಅಗತ್ಯ ಚಟುವಟಿಕೆಯೊಂದನ್ನು ಮಾಡಿ ನನಗೆ ವರದಿ ನೀಡಬೇಕು ಎಂದು ಶಾಸಕರು ತಿಳಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.