ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ವತಿಯಿಂದ ಸಾವ್ಯ ಶಾಲೆಯ ಮಕ್ಕಳಿಗೆ  ಉಚಿತ ನೋಟ್‌ಪುಸ್ತಕ ವಿತರಣೆ

ಬೆಂದ್ರಾಳ  : ಇಲ್ಲಿಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸಾವ್ಯದಲ್ಲಿ ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಇವರ ವತಿಯಿಂದ  ವಿದ್ಯಾರ್ಥಿಗಳಿಗೆ  ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ  ಜರುಗಿತು.
ಶ್ರೀ ಕ್ಷೇತ್ರ ಪಡ್ಯಾರಬೆಟ್ಟಿನ ಧರ್ಮದರ್ಶಿ ಜೀವಂಧರ್ ಕುಮಾರ್‌ರವರು  ಶಾಲೆಯ ಎಲ್ಲಾ ಮಕ್ಕಳಿಗೆ ಬರೆಯುವ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸಬೇಕೆಂದು ಪೋಷಕರಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ಸುಧೀರ್ ಕುಮಾರ್, ಅಂಡಿಂಜೆ ಗ್ರಾ.ಪಂ.ಅಧ್ಯಕ್ಷ ಮೋಹನ್ ಅಂಡಿಂಜೆ, ಅಂಡಿಂಜೆ ಗ್ರಾ.ಪಂ.ಸದಸ್ಯರಾದ  ವಿಠಲ್ ಪೂಜಾರಿ, ಶ್ರೀಮತಿ ನಿರ್ಮಲಾ ಸಾಂತಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕಯ್ಯ ಪೂಜಾರಿ, ಉಪಾಧ್ಯಕ್ಷೆ ಶಾಲಿನಿ ಹೆಗ್ಡೆ, ಜಯರಾಜ್ ಹೆಗ್ಡೆ,  ಸುಂದರ್ ಬಂಗೇರ, ರಾಜೇಶ್ ಜೈನ್ , ಸಿಆರ್ ಪಿ ಸಂತೋಷ್ ಕುಮಾರ್, ಶಾಲಾ ಮುಖ್ಯೋಪಾಧ್ಯಯ  ಅಬುಬಕ್ಕರ್,  ಶಾಲಾಭಿವೃದ್ಧಿ ಸಮಿತಿ ಸದಸ್ಯರು. ಎಲ್ಲಾ ಪೋಷಕರು, ಸಹಶಿಕ್ಷಕರು, ವಿದ್ಯಾರ್ಥಿಗಳು  ಭಾಗವಹಿಸಿದ್ದರು.

ದೀಪಾ ಶೆಟ್ಟಿ  ಸ್ವಾಗತಿಸಿ,  ಪಂಜು  ಕಾರ್ಯಕ್ರಮ ನಿರೂಪಿಸಿ , ಸಂತೊಷ್ ಕುಮಾರ್‌ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.