ಮಿತ್ತಬಾಗಿಲು ಆಸರೆ ಮಹಿಳಾ ಸಂಘದ ವತಿಯಿಂದ ಗಿಡ ನೆಡುವ ಕಾರ್ಯ

ಮಿತ್ತಬಾಗಿಲು : ಆಸರೆ ಮಹಿಳಾ ಸಂಘ ಮಿತ್ತಬಾಗಿಲು ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಬೆಳ್ತಂಗಡಿ ವಲಯ ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಿತ್ತಬಾಗಿಲು ಗ್ರಾಮದ ಶಾಂತಿಗುಡ್ಡೆ ಬೊಳ್ಳಾಜೆ ನೆಡು ತೋಪುವಿನಲ್ಲಿ ಒಂದು ಸಾವಿರ ಬೀಜದುಂಡೆಗಳನ್ನು ಹಾಗೂ ಸುಮಾರು 300 ವಿವಿಧ ಹಣ್ಣುಹಂಪಲು ಗಿಡಗಳನ್ನು ನೆಡುವ ಕಾರ್ಯಕ್ರಮ  ನಡೆಸಲಾಯಿತು.
ಕಾರ್ಯಕ್ರಮ‌ದ ಉದ್ಘಾಟನೆಯನ್ನು  ಆಸರೆ ಮಹಿಳಾ ಸಂಘದ ಅಧ್ಯಕ್ಷೆ  ಮಲ್ಲಿಕಾ, ಬೆಳ್ತಂಗಡಿ ತಾಲೂಕು ವಲಯ ಅರಣ್ಯಧಿಕಾರಿ ಸುಬ್ಬಯ್ಯ ನಾಯ್ಕ್ ಹಾಗೂ ಮಿತ್ತಬಾಗಿಲು ಗ್ರಾ.ಪಂ.ಅಧ್ಯಕ್ಷ ನಾರಾಯಣ ಪಾಠಾಳಿ ಉಪಸ್ಥಿತರಿದ್ದು, ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಬಂಗಾಡಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ‌ದ ಅಧ್ಯಕ್ಷ ಶ್ರೀಧರ ದೇವಾಡಿಗ, ಪ್ರಾದೇಶಿಕ ಅರಣ್ಯ ಇಲಾಖೆಯ ಬೆಳ್ತಂಗಡಿ ತಾಲೂಕಿನ ಉಪವಲಯ ಸಂರಕ್ಷಣಾಧಿಕಾರಿ‌ ರವೀಂದ್ರ ಅಂಕಲಾಜಿ, ರವೀಂದ್ರ. ಕೆ ಹಾಗೂ ಅರಣ್ಯ ರಕ್ಷಕರಾದ ಆನಂದ ಮೋಹಿತೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಬಾಗಿಲು, ಬಂಡಾರಿಕೊಡಿಯ ವಿದ್ಯಾರ್ಥಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಿ ಒಕ್ಕೂಟ‌, ಗ್ರಾಮ ಪಂಚಾಯತ್ ಮಿತ್ತಬಾಗಿಲು ಹಾಗೂ ಸಾರ್ವಜನಿಕರು   ಗಿಡ ನೆಡುವ ಕಾರ್ಯ‌ದಲ್ಲಿ  ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.