ಸತ್ಯಸಾಯಿ ಸೇವಾಕ್ಷೇತ್ರದಲ್ಲಿ ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ: ಯೋಗ ಸಂದೇಶ ಧ್ಯಾನ ಕೇಂದ್ರ ಬೆಳ್ತಂಗಡಿ ಮತ್ತು ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೆಕೋಟೆ ಇದರ ಸಹಯೋಗದಲ್ಲಿ ಯೋಗ ಗುರು ಮಹೇಶ್ ಪತ್ತರ್ ಇವರ ನೇತೃತ್ವದಲ್ಲಿ ವಿಶ್ವಯೋಗ ದಿನಾಚರಣೆಯು ಜೂ.21 ರಂದು ಶ್ರೀ ಸಾಯಿ ಕ್ಷೇತ್ರ ಹಳೆಕೋಟೆಯಲ್ಲಿ ಜರಗಿತು.
ಯೋಗ ಗುರುಗಳಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕು। ರಶ್ಮಿ ಎ.ಆರ್ ಜೈನ್‌ರವರು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸುಖ, ಶಾಂತಿ ಮತ್ತು ಜೀವನದಲ್ಲಿ ಸಾಧನೆ ಮಾಡುವಂತಹ ವಿಧಾನವನ್ನು ಯೋಗದ ಮುಖಾಂತರ ಯೋಗ ಬಂಧುಗಳಿಗೆ  ತಿಳಿಯಪಡಿಸಿದರು.
ವಾಣಿ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕಿ  ಆಶಾ ಅಭಿಷೇಕ್‌  ಯೋಗದಿಂದಾಗುವ  ಪ್ರಯೋಜನ, ಸಾಧನೆ, ಯೋಗದಿಂದ ರೋಗ ಮುಕ್ತ ಎಂಬಿತ್ಯಾದಿ ವಿಚಾರಗಳನ್ನು ತಿಳಿ ಸಿದರು.
ಗುರುವಾಯನಕೆರೆ ಶಾರದಾಂಬ ಯೋಗಕೇಂದ್ರದ ಅಧ್ಯಕ್ಷ  ಸಿ.ಎಚ್ ಪ್ರಭಾಕರ್, ಪದಾಧಿಕಾರಿ ಮತ್ತು ಸಕ್ರಿಯ ಯೋಗ ಕಾರ್ಯಕರ್ತರಾದ  ಸುಮಿತಾ ವಿ.ಫೆರ್ನಾಂಡಿಸ್,  ರಾಗಿಣಿ ಸತೀಶ್ ನಾಯಕ್ ಮತ್ತು ಸದಸ್ಯರು ಸಹಕರಿಸಿದರು.
ಸಹ ಯೋಗ ಗುರುಗಳಾದ   ರಾಜಗೋಪಾಲಭಟ್   ಸ್ವಾಗತಿಸಿ,  ಮಂಗಳಾ ರತ್ನಾಕರ ರಾವ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.