ಶ್ರೀ ಸೌತಡ್ಕ ದೇವಳದಲ್ಲಿ ಸ್ವಚ್ಚತಾ ಕಾರ್ಯ ಶ್ರಮದಾನ

Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ ದ ಸೌತಡ್ಕ ಶ್ರೀ ಮಹಾಗಣಪತಿ ದೇವಳವನ್ನು ನೀರಿನಿಂದ ತೊಳೆದು ಶುಚಿಗೊಳಿಸುವ ಶ್ರಮದಾನವು ಇತ್ತೀಚೆಗೆ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಬ್ಬಂದಿಗಳಾದ ಹರೀಶ್ ಗೌಡ ಆರೆಂಬಿ ಇವರ ನೇತೃತ್ವದ ಸುಮಾರು ಹದಿನಾರು ಜನರ ತಂಡದಲ್ಲಿ ದೇವಳದ ಕಟ್ಟೆ ಮತ್ತು ಅಂಗಣದೊಳಗೆ ನೆಲಕ್ಕೆ ಹಾಸಲಾದ ಕಲ್ಲು ಹಾಸುಗಳಲ್ಲಿ ಹಿಡಿದಿದ್ದ ಹಾವಸೆಗಳನ್ನು ಉಜ್ಜಿ ತೊಳೆಯುವ ಶ್ರಮದಾನವನ್ನು ನಡೆಸಿತು. ಹಗಲು ಹೊತ್ತಿನಲ್ಲಿ ದೇವಳಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಿರಲೆಂದು ರಾತ್ರೆ ವೇಳೆಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆಯಲ್ಲಿ ಈ ಶ್ರಮದಾನವನ್ನ ನಡೆಸಲಾಯಿತು.

ಕಳೆದ ನಾಲ್ಕೈದು ವರ್ಷಗಳಿಂದ ಇದೇ ತಂಡ ಕೊಕ್ಕಡ, ಸೌತಡ್ಕ, ಶಿಶಿಲ, ಶಿಬಾಜೆ, ಬೂಡುಮುಗೇರು ಮುಂತಾದ ದೇವಳಗಳಲ್ಲಿ ತಲಾ ಒಂದೊಂದು ದಿನಗಳಲ್ಲಿ ಈ ಶ್ರಮದಾನವನ್ನು ನಡೆಸುತ್ತಾ ಬರುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದಲ್ಲಿ ಹರ್ಷೇಂದ್ರ ಕುಮಾರ್ ಹೆಗ್ಗಡೆಯವರ ಸೂಚನೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಿಬ್ಬಂದಿಗಳದ್ದೇ ಆದ ಈ ಒಂದು ತಂಡದ ಮೂಲಕ ಈ ಭಾಗದ ದೇವಾಲಯಗಳನ್ನು ವರ್ಷಕ್ಕೊಂದು ಬಾರಿ ಮಳೆಗಾಲದ ನಂತರ ಯಾ ಮೊದಲು ಶುಚಿಗೊಳಿಸುವ ಕಾರ್ಯವನ್ನು ನಿರಂತರವಾಗಿ ನಡೆಸುವ ಸಂಕಲ್ಪವನ್ನು ಮಾಡಿರುವುದಾಗಿ ಹರೀಶ್ ಗೌಡ ಆರೆಂಬಿ ಈ ಸಂದರ್ಭ ತಿಳಿಸಿದರು. ದೇವಳದ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.