ಪದ್ಮುಂಜ: ಸ್ವಚ್ಛ ಮೇವ ಜಯತೇ ಆಂದೋಲನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಪದ್ಮುಂಜ: ಗ್ರಾಮಾಭಿವೃಧ್ದಿ ಮತ್ತು ಪಂಚಾಯತ್ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾ. ಪಂ ಬೆಳ್ತಂಗಡಿ, ಗ್ರಾ.ಪಂ ಕಣಿಯೂರು, ಸಿ.ಎ ಬ್ಯಾಂಕ್ ಪದ್ಮುಂಜ, ಅರಣ್ಯ ಇಲಾಖೆ ಉಪ್ಪಿನಂಗಡಿ, ಹಾಲು ಉತ್ಪಾಕರ ಸರಕಾರಿ ಸಂಘ ಪದ್ಮುಂಜ, ಪ್ರಾಥಮಿಕ ಆರೋಗ್ಯ ಕೇಂದ್ರ ಕಣಿಯೂರು, ಕೆನರಾ ಬ್ಯಾಂಕ್ ಪದ್ಮುಂಜ ಹಾಗೂ ಶಾಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿಸ್ವಚ್ಛ ಮೇವ ಜಯತೇ‘  ಆಂದೋಲನ ಕಾರ್ಯಕ್ರಮ ಪದ್ಮುಂಜ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿತು.
ಕಣಿಯೂರು ಗಾ.ಪಂ. ಅಧ್ಯಕ್ಷ ಸುನಿಲ್ ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಣಿಯೂರು ಕ್ಷೇತ್ರದ ಜಿ.ಪಂ ಸದಸ್ಯ ಶಾಹುಲ್ ಹಮೀದ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ನಾವು ನಮ್ಮ ಮನೆ, ನಮ್ಮ ಪರಿಸರ, ನಮ್ಮ ಊರು, ನಮ್ಮ ಶಾಲಾ ಕಾಲೇಜುಗಳು, ಧಾರ್ಮಿಕ ಕ್ಷೇತ್ರಗಳು ಎಲ್ಲವೂ ಸ್ವಚ್ಛತೆಯಿರಬೇಕು. ಅದರೊಂದಿಗೆ ನಮ್ಮ ಮನಸ್ಸು ಸ್ವಚ್ಛತೆಯಿದ್ದರೆ ಮಾತ್ರ ಅರ್ಥಪೂರ್ಣವಾದ ಸ್ವಚ್ಛತಾ ದೇಶವಾಗುತ್ತದೆ ಎಂದರು.
ಪದ್ಮುಂಜ ಕಾಲೇಜು ಪ್ರಾಂಶುಪಾಲ ದಾಮೋದರ್ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಅಧ್ಯಾಪಕ ವಿ.ಆರ್ ಹೆಗ್ಡೆ ದಿಕ್ಸೂಚಿ ಬಾಷಣ ಮಾಡಿದರು. ಪ್ರೌಢಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ರಘುರಾಮ ವೈ, ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಬಾಬು ಗೌಡ, ತಾ.ಪಂ ಸದಸ್ಯರಾದ ಅಮಿತಾ, ಕೃಷ್ಣಯ್ಯ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್, ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜೀವ ರೈ, ಶಾರದಾ ಆರ್ ರೈ ಮುಗೆರೋಡಿ, ಶಿಕ್ಷಕ ಸಂಘದ ಕೋಶಾಧಿಕಾರಿ ಬೀರಾದಾರ್, ಗ್ರಾ.ಪಂ.ಸದಸ್ಯರುಗಳಾದ ಸೀತಾರಾಮ ಮಡಿವಾಳ, ನರಸಿಂಹ ಶೆಟ್ಟಿ, ಕೃಷ್ಣ ನೀರಾಡಿ, ಕೇಶವ, ಗಾಯತ್ರಿ, ಪ್ರಮೀಳಾ, ಲಲಿತಾ, ಉಪ್ಪಿನಂಗಡಿ ಠಾಣಾಧಿಕಾರಿ ಭರತ್, ಕಾಲೇಜು ಸಮಿತಿ ಉಪಾಧ್ಯಕ್ಷ ಪುರಂದರ ಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕರಾದ ಸುಮತಿ ಸ್ವಾಗತಿಸಿ, ಮನೋಹರ್ ಕಾರ್ಯಕ್ರಮ ನಿರೂಪಿಸಿ, ಮಹೇಶ್ ಹೆಚ್.ಎನ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.