ಬೆಳ್ತಂಗಡಿ: ಅಬುಧಾಬಿಯ ಹಾಸ್ಪಿಟಾಲಿಟಿ ಗ್ರೂಪಿನ ಸಹಸಂಸ್ಥೆಯ ಕಾರ್ಮಿಕರ ಸಹಕಾರಿ ಸಂಘದಮಹಾಸಭೆಯ ಸಂಘದ ಅಧ್ಯಕ್ಷ ಪಿ.ಚಂದ್ರಶೇಖರ ಸಾಲಿಯಾನ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದು ಮುಂದಿನ ಎರಡು ವರ್ಷದ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಸಂಘದ ಅಧ್ಯಕ್ಷರಾಗಿ ಪಿ. ಚಂದ್ರಶೇಖರ ಸಾಲಿಯಾನ್ ಕೊಯ್ಯೂರು ಇವರು ಸತತ 6ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಶಮೀರ್ ಹಬೀಬ್, ಉಪಾಧ್ಯಕ್ಷರಾಗಿ ಸುಧೀರ್ ಪರಮನಂದ್ ಹಾಗೂ ನಝ್ರುಲ್ ಇಸ್ಲಾಂ, ಕಾರ್ಯದರ್ಶಿಯಾಗಿ ಶಾಜಿ ಪಿ. ಯಸ್, ಜೊತೆ ಕಾರ್ಯದರ್ಶಿಯಾಗಿ ಯಮಲಾಲ್, ಕೋಶಾಧಿಕಾರಿಯಾಗಿ ನಿತೀಶ್ ಕುಮಾರ್ ಹಾಗೂ ಸಮಿತಿ ಸದಸ್ಯರಾಗಿ ರಂಜಿತ್ ಕುಮಾರ್, ತಿನಿನ್, ವಿಕಾಶ್ ಚಂದ್, ಮಹಮ್ಮದ್ ಟಿ.ಟ್ಟು, ಸುರೇಶ್ ಟಿ.ವಿ, ಸತೀಶ್ ವೆಲಪ್ಪನ್, ಅನೀಲ್ ಜೋಸೆಪ್ ಹಾಗೂ ಪಪ್ಪನ್ ಮಂಡಲ್ ಆಯ್ಕೆಯಾದgರು. ಅಧ್ಯಕ್ಷರಾಗಿ ಮರು ಆಯ್ಕೆಯಾದ ಚಂದ್ರಶೇಖರ ಸಾಲಿಯಾನ್ರವರು ತನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ಮುಂದೆಯೂ ಎಲ್ಲರ ಪೀತಿ ವಿಶ್ವಾಸದೊಂದಿಗೆ ಸಹಕಾರವನ್ನು ಕೋರಿದರು. ಪಪ್ಪನ್ ಮಂಡಲ್ ಸ್ವಾಗತಿಸಿ, ಸುಧೀರ್ ಪರಮನಂದ್ ವಂದಿಸಿದರು. ಬಿಷ್ಣು ಕುನ್ರವರು ಲೆಕ್ಕಪತ್ರ ಮಂಡಿಸಿದರು.