ಉಪ್ಪಿನಂಗಡಿ ಯುವವಾಹಿನಿ ಘಟಕದಿಂದ ಗುರುಸಂದೇಶ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇಳಂತಿಲ : 20ನೇ ಶತಮಾನದ ಆರಂಭದಲ್ಲಿ ಕೇರಳದ ಹಿಂದೂ ಸಮಾಜದಲ್ಲಿ ಉಂಟಾದ ಶೂದ್ರರು, ಅಸ್ಪೃಷ್ಯರು ಸ್ತ್ರೀಯರ ವಿರುದ್ದದ ಘೋರ ಕ್ರೌರ್ಯ, ದೌರ್ಜ್ಯನ್ಯರ ವಿರುದ್ಧ ನಾರಾಯಣ ಗುರುಗಳು ಮಾಡಿದಂತ ಚಳುವಳಿ, ಅಗ್ರಗಣ್ಯವಾದುದಾಗಿದ್ದು ನಾರಾಯಣ ಗುರುಗಳ ಸೇವಾವ್ಯಾಪ್ತಿ ವಿಶಾಲವಾಗಿತ್ತು ಮತ್ತು ಅವರ ಚಳುವಳಿಗಳಲ್ಲಿ ಜನಪರ ಕಾಳಜಿಯಿತ್ತು ಎಂದು ಕೇರಳದ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಹೇಳಿದರು.
ಅವರು ಇತ್ತೀಚೆಗೆ ಉಪ್ಪಿನಂಗಡಿ ಯುವವಾಹಿನಿ ಘಟಕದ ವತಿಯಿಂದ ಇಳಂತಿಲ ಗ್ರಾಮದ ಆಟಾಲು ಜಿನ್ನಪ್ಪ ಪೂಜಾರಿಯವರ ಸೀತಾ ನಿವಾಸದಲ್ಲಿ ನಡೆದ ಗುರುಸಂದೇಶ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಕುರಿತಾಗಿ ಸಂದೇಶ ನೀಡಿದರು. ಕೇರಳದಲ್ಲಿ ಅನೇಕ ಜಾತಿಪಂಥಗಳಿದ್ದವು. ಮೇಲ್ಜಾತಿ, ಕೆಳಜಾತಿ, ಅಸ್ಪಶ್ಯತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಎಲ್ಲೆಡೆ ಜನರ ಮನಸ್ಸನ್ನು ಹರಿದು ತಿನ್ನುತ್ತಿದ್ದವು. ಆ ಸಂದರ್ಭದಲ್ಲಿ ಅವತಾರ ಪುರುಷರಾಗಿ ಜಸಿದ ನಾರಾಯಣ ಗುರುಗಳು ದೇವಸ್ಥಾನಗಳಿಗೆ ಕೆಳ ವರ್ಗದವರಿಗೆ ಪ್ರವೇಶ ಇಲ್ಲದ ಕಡೆಗಳಲ್ಲಿ ತಾವೇ ದೇವಾಲಯಗಳನ್ನು ಸ್ಥಾಪಿಸುವುದರ ಮೂಲಕ ಒಂದು ಹೊಸ ಅಲೋಚನಾ ಕ್ರಮವನ್ನು ಹುಟ್ಟುಹಾಕಿ ಆ ಮೂಲಕ ಕೇರಳದಲ್ಲಿ ಹೊಸ ಧಾರ್ಮಿಕ ಕ್ರಾಂತಿಯನ್ನು ಗುರುಗಳು ತಂದರು ಎಂದವರು ಹೇಳಿದರು.
ಸಮಾರಂಭದಲ್ಲಿ ಹಿರಿಯರಾದ ವರದರಾಜ್.ಎಂ, ಜಿನ್ನಪ್ಪ ಪೂಜಾರಿ ಆಟಾಲು, ಗೋಪಾಲ ಪೂಜಾರಿ ಗುಂಡಿಮನ್ಯ, ಇಳಂತಿಲ ಗ್ರಾ.ಪಂ ಸದಸ್ಯೆ ಸವಿತಾ ಮೋಹನನಾಯ್ಕ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್.ಬಿ ಸುವರ್ಣ, ಬೆಳ್ತಂಗಡಿ ಯುವವಾಹಿನಿ ಘಟಕದ ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಮಚ್ಚಿನ, ಮಂಗಳೂರು ಯುವವಾಹಿನಿ ಘಟಕದ ಸದಸ್ಯ ಶೇಷಗಿರಿ ಪೂಜಾರಿ, ಉಪ್ಪಿನಂಗಡಿ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರುಗಳಾದ ಜಯಾನಂದ ಕಲ್ಲಾಪು, ಗುಣಕರ ಅಗ್ನಾಡಿ, ಜನಾರ್ಧನ ಪೂಜಾರಿ, ಕೃಷ್ಣಪ್ಪ ಪೂಜಾರಿ, ಅಶೋಕ ಪಡ್ಪು, ಸುಂದರ ಎಲಿಯ ಮೊದಲಾದವರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ ಸ್ವಾಗತಿಸಿ, ನ್ಯಾಯವಾದಿ ಮನೋಹರ ಕುಮಾರ್, ನಯನಾ ಮನೋಹರ್, ಹರೀಶ ಪೂಜಾರಿ, ಸುರೇಖಾ ಹರೀಶ್, ಆನಂದ ಪೂಜಾರಿ ಆಟಾಲು ಮುಂತಾದವರು ಆಟಾಲು ಕುಟುಂಬಸ್ಥರ ಪರವಾಗಿ ಸ್ವಾಮೀಜಿಗಳನ್ನು ಗೌರವಿಸಿದರು. ಘಟಕದ ಕಾರ್ಯದರ್ಶಿ ನ್ಯಾಯವಾದಿ ಅನಿಲ್ ಕುಮಾರ್ ದಡ್ಡು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.