ಮದ್ದಡ್ಕ: ನಿಶ್ಚಿತ್ ಶೆಟ್ಟಿಯವರ ಚಿಕಿತ್ಸೆಗೆ ನೆರವಾಗಿ

ಕುವೆಟ್ಟು; ಇಲ್ಲಿಯ ಮದ್ದಡ್ಕ ನೇರಳಕಟ್ಟೆ ನಿವಾಸಿ ಚಂದ್ರಶೇಖರ್ ರವರ ಪುತ್ರ ನಿಶ್ಚಿತ್ ಶೆಟ್ಟಿ ಯವರು ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಇವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿರುವ ನಿಶ್ಚಿತ್‌ರವರ ಶುಶ್ರೂಷೆಗೆ ಈಗಾಗಲೆ ರೂ.3 ಲಕ್ಷದಷ್ಟು ಆಸ್ಪತ್ರೆ ಬಿಲ್ಲು ಪಾವತಿಸಿದ್ದು, ಇವರು ಚೇತರಿಸಲು ಇನ್ನೂ ಆಸ್ಪತ್ರೆ ಬಿಲ್ಲು 10 ಲಕ್ಷ ರೂ. ಗಡಿ ದಾಟಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ನಿಶ್ಚಿತ್‌ರವರ ತಂದೆ ಚಂದ್ರಶೇಖರ್ ಹೊಟೇಲ್ ಕಾರ್ಮಿಕರಾಗಿದ್ದು, ಮನೆಯಲ್ಲಿ ಬಡತನವಿದ್ದರೂ ಮಗನನ್ನು ಓದಿಸಿ ಉನ್ನತ ಸ್ಥಾನದಲ್ಲಿ ಬದುಕುವುದನ್ನು ಕಾಣಬೇಕೆಂಬ ಆಸೆ ಹೊಂದಿದ್ದರು. ಮಗ ಕಷ್ಟಪಟ್ಟು ಓದಿ ಎಸ್.ಡಿ.ಎಂ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡು ಇನ್ನೇನು ಕಾಲೇಜು ಮೆಟ್ಟಿಲೇರಬೇಕು ಎನ್ನುವಾಗಲೇ ಈ ದುರಂತ ಸಂಭವಿಸಿದೆ.
ಬಡತನದಲ್ಲಿರುವ ನಿಶ್ಚಿತ್‌ನ ಕುಟುಂಬ ಇಂದು ಮಗನನ್ನು ಉಳಿಸುವ ಸಲುವಾಗಿ ದಾನಿಗಳ ಆರ್ಥಿಕ ನೆರವಿನ ಮೊರೆ ಹೋಗಿದ್ದಾರೆ. ಆದುದರಿಂದ ಸಹೃದಯಿ ದಾನಿಗಳು ಕೈಲಾದಷ್ಟು ಸಹಾಯ ಧನ ನೀಡಿ ಚಂದ್ರಶೇಖರ್ ಕುಟುಂಬದ ಕಣ್ಣೀರು ಒರೆಸಬೇಕಾಗಿದೆ.

ಖಾತೆದಾರರ ಹೆಸರು: ವಾಣಿ ಕೋಂ ಚಂದ್ರಶೇಖರ, ಖಾತೆ ಹೆಸರು: ಸಿಂಡಿಕೇಟ್ ಬ್ಯಾಂಕ್, ಖಾತೆ ಸಂಖ್ಯೆ: 01832200158294 , ಐಎಫ್ ಎಸ್‌ಸಿ ಕೋಡ್: SYNB 0000183, Google Pay: 9902793103( ನಿಖಿಲ್ ಶೆಟ್ಟಿ). ಹೆಚ್ಚಿನ ಮಾಹಿತಿಗಾಗಿ ನಿಶ್ಚಿತ್ ಸಹೋದರನ ಮೊಬೈಲ್ ಸಂಖ್ಯೆ: 9880718656 ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.