ಕೊಕ್ಕಡ ಪಂಚಾಯತ್‌ಗೆ ಹೊಸ ಅಧ್ಯಕ್ಷರ ನೇಮಕ ಮಾಡುವಂತೆ ಸದಸ್ಯರಿಂದ ಸಿಇಒ, ಎಸಿ ಗೆ ಮನವಿ

ಕೊಕ್ಕಡ: ಪ್ರಕರಣವೊಂದರ ಕಾರಣಕ್ಕಾಗಿ ಸದಸ್ಯತ್ವ ಮತ್ತು ಅಧ್ಯಕ್ಷ ಸ್ಥಾನ ಕಳೆದುಕೊಂಡಿರುವ ಇಲ್ಲಿನ ಪಂಚಾಯತ್ ಅಧ್ಯಕ್ಷರ ತೆರವಾದ ಸ್ಥಾನ ತುಂಬದೇ ಇರುವುದರಿಂದ ಅಭಿವೃದ್ಧಿ ಅನುಷ್ಠಾನಗಳಿಗೆ ತೊಂದರೆ ಮತ್ತು ತೀವ್ರ ಹಿನ್ನಡೆಯಾಗಿರುವುದರಿಂದ ಶೀಘ್ರದಲ್ಲೇ ಹೊಸ ಅಧ್ಯಕ್ಷರ ನೇಮಕಗೊಳಿಸಿ ಅದೇಶ ನೀಡಬೇಕು ಎಂದು ಪಂಚಾಯತ್‌ನ ಬಿಜೆಪಿ ಬೆಂಬಲಿತ 7 ಮಂದಿ ಸದಸ್ಯರು ಸಹಿ ಹಾಕಿದ ಪತ್ರವನ್ನು ಜಿ.ಪಂ ಸಿಇಒ ಮತ್ತು ಪುತ್ತೂ ಎಸಿ ಯವರಿಗೆ ಸಲ್ಲಿಸಿದ್ದಾರೆ.
ಶೀನನಾಯ್ಕ, ಕುಶಾಲಪ್ಪ ಗೌಡ, ರವಿ ನಾಯ್ಕ, ಎ.ಕೆ ಇಬ್ರಾಹಿಂ, ಕುಸುಮಾ, ಪವಿತ್ರಾ ಮತ್ತು ಭಗೀರಥ ಅವರು ಈ ಬಗ್ಗೆ ಆಡಳಿತದ ಗಮನಸೆಳೆದಿದ್ದಾರೆ.
ಇದೀಗ ಉಪಾಧ್ಯಕ್ಷರು ಪ್ರಭಾರ ಅಧಿಕಾರ ನಿರ್ವಹಿಸಬಹುದಾದರೂ ಅವರ ಮೇಲೆ ಉಚ್ಛಾಟಿತ ಅಧ್ಯಕ್ಷರು ಪ್ರಭಾವ ಬೀರುವ ಸಾಧ್ಯತೆಯೂ ಇದೆ. ಅಲ್ಲದೆ ಓದಲು ಬರೆಯಲು ಆಗದವರಾಗಿರುವುದರಿಂದ ಗ್ರಾಮದ ಎಲ್ಲಾ ಕೆಲಸಕಾರ್ಯಗಳಿಗೆ ತೊಡಕಾಗುವ ಸಂಭವವನ್ನು ಆಡಳಿತ ಗಂಭೀರವಾಗಿ ಮನಗಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಮಂಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.