ಬೆಳ್ತಂಗಡಿ: ನೊಂದ ಕುಟುಂಬಗಳಿಗೆ ಸಹಾಯಹಸ್ತ ಚಾಚುವ ಮೂಲಕ ಯಶಸ್ವಿ 2ನೇ ವರ್ಷದ ಪಯಣ ಮುಗಿಸಿ, 3ನೇ ವರ್ಷದ ಪಯಣದಲ್ಲಿರುವ ವೀರಕೇಸರಿ ಬೆಳ್ತಂಗಡಿ ಸಂಘಟನೆಯು ಎರಡು ಕುಟುಂಬಕ್ಕೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ
ವೀರಕೇಸರಿ ಸಂಘಟನೆಯ 84ನೇ ಸೇವಾಯೋಜನೆಯಾಗಿ ಗಂಟಲಿನ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮೈರ ಮನೆ ನಿವಾಸಿ ರಾಘವೇಂದ್ರ ಬೆಳ್ಚಡ ರವರ ಚಿಕಿತ್ಸಾ ವೆಚ್ಚಕ್ಕಾಗಿ ರೂ. 15 ಸಾವಿರ ಹಾಗೂ 85ನೇ ಸೇವಾಯೋಜನೆಯಾಗಿ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಕಲ್ಲಂಜ ಮನೆ ನಿವಾಸಿ ಸುನಂದ ರವರಿಗೆ ಗರ್ಭಕೋಶದ ಶಸ್ತ್ರಚಿಕಿತ್ಸಾ ವೆಚ್ಚಕ್ಕಾಗಿ 15ಸಾವಿರ ರೂಗಳ ಚೆಕ್ಕನ್ನು ತಂಡದ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.