ಶ್ರೀ ಕ್ಷೇತ್ರ ಪಡ್ಯಾರ ಬೆಟ್ಟದಿಂದ ಉಚಿತ ನೋಟ್ ಪುಸ್ತಕ ವಿತರಣೆ

ವೇಣೂರು: ಸ.ಹಿ.ಪ್ರಾ.ಶಾಲೆ ಪಡ್ಡಂದಡ್ಕ ಇಲ್ಲಿ ಶ್ರೀ ಕ್ಷೇತ್ರ ಪಡ್ಯಾರ ಬೆಟ್ಟದ ವತಿಯಿಂದ ಬರೆಯುವ ಪುಸ್ತಕ ವಿತರಣಾ ಸಮಾರಂಭವು ನಡೆಯಿತು. ಶ್ರೀ ಕ್ಷೇತ್ರದ ಧರ್ಮದರ್ಶಿ ಜೀವಂಧರ್ ಕುಮಾರ್ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ, ಶಾಲಾ ಶಿಕ್ಷಣವು ಮಕ್ಕಳಿಗೆ ಕೇವಲ ಪುಸ್ತಕದಲ್ಲಿನ ಜ್ಞಾನವನ್ನು ನೀಡಿದರೆ ಸಾಲದು ಅದು ಮಕ್ಕಳ ಸಾಮಾನ್ಯ ಜ್ಞಾನವನ್ನು ಬೆಳೆಸುವಂತಿರಬೇಕು. ಅಲ್ಲದೆ ತಾನೂ ಸರ್ಕಾರಿ ಶಾಲೆಗಳ ಉಳಿಯುವಿಕೆಗೆ ಸಹಕರಿಸುವುದಾಗಿ ತಿಳಿಸಿದರು.
ಇಲಾಖಾ ವತಿಯಿಂದ ಆಗಮಿಸಿರುವ ಬಿಐಇಆರ್‌ಟಿ ಜಗದೀಶ್‌ರವರು ಪ್ರಾಥಮಿಕ ಶಾಲಾ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು
ಸಮಾರಂಭದ ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾ ವಸಂತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯ ಹರಿಪ್ರಸಾದ್.ಪಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಎಸ್.ಎಂ. ಕೋಯ, ಬೆಳ್ತಂಗಡಿ ಸಮೂಹ ಸಂಪನ್ಮೂಲ ಕೇಂದ್ರದ ಬಿಆರ್‌ಪಿ ಜೆ.ಟಿ.ಮಂಜುಳಾ, ಬಿಐಇಆರ್‌ಟಿ ಜಗದೀಶ್.ಎಚ್, ಕ್ಲಸ್ಟರ್‌ನ ಸಿಆರ್‌ಪಿ ಆರತಿ ಕುಮಾರಿ, ಎಸ್‌ಡಿಎಂಸಿ ಉಪಾಧ್ಯಕ್ಷರು ಮತ್ತು ಸದಸ್ಯರ, ಶಿಕ್ಷಕ ವೃಂದದವರು, ಪೋಷಕರು ಪಾಲ್ಗೊಂಡಿದ್ದರು.
ಮುಖ್ಯ ಶಿಕ್ಷಕಿ ಕಮಲಮ್ಮ ಸ್ವಾಗತಿಸಿ, ಸಹ ಶಿಕ್ಷಕಿ ವಿನೋದ ಕುಮಾರಿ ವಂದಿಸಿದರು. ಸಹಶಿಕ್ಷಕಿ ಗುಣವತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಎಸ್‌ಡಿಎಂಸಿ ಮತ್ತು ಪೋಷಕರ ವತಿಯಿಂದ ಧರ್ಮದರ್ಶಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.