ಈಜಲು ಹೋಗಿದ್ದ ಬಾಲಕ ಹಾಸನದಲ್ಲಿ ನೀರುಪಾಲು

Advt_NewsUnder_1
Advt_NewsUnder_1
Advt_NewsUnder_1

ಕಕ್ಕಿಂಜೆ: ಮೂಲತಃ ಕಕ್ಕಿಂಜೆ ಗಾಂಧಿನಗರದಲ್ಲಿ ವಾಸವಾಗಿದ್ದು ಪ್ರಸ್ತುತ ಹಾಸನದಲ್ಲಿರುವ ಕುಟುಂಬದ ಬಾಲಕ ಹಾಫಿಳ್ ಸಿರಾಜುದ್ದೀನ್ ಅವರು ಕಾಲು ಜಾರಿ ಕೆರೆಗೆ ಬಿದ್ದು ನೀರು ಪಾಲಾದ ಘಟನೆ ಜೂ. 6 ರಂದು ನಡೆದಿದ್ದು ಅವರ ಮೃತದೇಹ ಮರುದಿನ ಪತ್ತೆಯಾಗಿದೆ.
ಪೆರ್ನಾಲ್ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತಕಾರಿಯಾಗಿ ಬಂದ ಸುದ್ದಿ ಇದಾಗಿದ್ದು ವಿವರ ತಿಳಿಯುತ್ತಿದ್ದಂತೆ ಸ್ಥಳೀಯ ಅಗ್ನಿಶಾಮಕದಳ ಮತ್ತು ನಾಗರಿಕರು ಮೃತದೇಹದ ಶೋಧ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರ ಸೂಚನೆ ಮೇರೆಗೆ ಕಡಲತಡಿಯ ಪ್ರಖ್ಯಾತ ಈಜುಗಾರರು ಹಾಗೂ ಮುಳುಗು ತಜ್ಞರಾದ ಜಾವೆದ್, ಝಾಕಿರ್, ಸಾದಿಕ್ ಮತ್ತು ಹಸನ್ ಇವರುಗಳು ಮೃತದೇಹದ ಹುಡುಕಾಟ ಕಾರ್ಯಾಚರಣೆಗೆ ಧಾವಿಸಿ ಯಶಸ್ವಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.