HomePage_Banner_
HomePage_Banner_
HomePage_Banner_

ಗೇರುಕಟ್ಟೆ ಪೇಟೆ ಮಧ್ಯೆ ಬಾಗದಲ್ಲಿ ಪ್ಲಾಸ್ಟಿಕ್, ತ್ಯಾಜ್ಯದ ರಾಶಿ ಗಬ್ಬು ವಾಸನೆ

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ನಿಬಂಧನೆಗಳನ್ನು ಗಾಳಿಗೆ ತೂರಿ ಗೇರುಕಟ್ಟೆ ಪೇಟೆಯ ಮಧ್ಯೆ ಬಾಗ ಹಾಗೂ ರಸ್ತೆ ಪಕ್ಕದಲ್ಲಿ ಪ್ಲಾಸ್ಟಿಕ್, ಕೊಳೆತ ತರಕಾರಿ, ಮೊಟ್ಟೆ, ಖಾಲಿ ಬಾಟಲಿ, ಕಸಕಡ್ಡಿಗಳ ರಾಶಿಯಾಗಿದೆ. ಕೆಲವೊಂದು ಅಂಗಡಿ, ಬೇಕರಿ ಮತ್ತು ಬಾಡಿಗೆ ಮನೆಯರು ರಾತ್ರಿವೇಳೆ ತ್ಯಾಜ್ಯಗಳನ್ನು ತಂದು ಹಾಕಿ ಕೈತೊಳೆದುಕೊಳ್ಳುತ್ತಾರೆ. ಸಾರ್ವಜನಿಕರು ಪಂಚಾಯತ್ ಗಮನಕ್ಕೆ ತಂದರು ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹಾಗೂ ಪಕ್ಕದಲ್ಲಿ ಮನೆ, ಶಾಲೆ, ಅಂಗಡಿಗಳಿದ್ದು,ಈ ಪರಿಸರದಲ್ಲಿ ಗಬ್ಬು ವಾಸನೆಯಿಂದ ಮೂಗು, ಬಾಯಿ ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈಗಲೇ ಕಳಿಯ, ನ್ಯಾಯತರ್ಪು ಪರಿಸರದಲ್ಲಿ ಮಲೇರಿಯಾ, ಡೇಂಗ್ಯೂ ಮಾರಕ ರೋಗ ವ್ಯಾಪಕವಾಗಿ ಹರಡಿರುವ ಕಾರಣ ಎರಡೂ ಗ್ರಾಮದ ಹೆಚ್ಚಿನ ಜನರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧ ಪಟ್ಟವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ  ಸೂಕ್ತ  ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಗೈಗೊಳ್ಳುವಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸುತ್ತಿದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.