ಉಜಿರೆಯಲ್ಲಿ ಮಾರ್ಪಡಿಸಿದ ಉದ್ಯೋಗದಾತರ ಉಪಯೋಗಿ ಚಿಕಿತ್ಸಾಲಯ ಉದ್ಘಾಟನೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇದರ ನಿರ್ವಹಣೆಯಡಿ ಉಜಿರೆಯ ಪಂಚಮಿ ಕಟ್ಟಡದಲ್ಲಿ ಶುಭಾರಂಭಗೊಂಡ ಮಾರ್ಪಡಿಸಿದ ಉದ್ಯೋಗದಾತರ ಉಪಯೋಗಿ ಚಿಕಿತ್ಸಾಲಯದ ಉದ್ಘಾಟನಾ ಸಮಾರಂಭವು  ಜೂ.7 ರಂದು ಜರುಗಿತು. ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಉದ್ಘಾಟನೆಯನ್ನು ನೆರವೇರಿಸಿ, ಶುಭ ಹಾರೈಸಿದರು.
ನಂತರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಪರ ಆಯುಕ್ತ ಮತ್ತು ರಾಜ್ಯ ಇ.ಎಸ್.ಐ.ಸಿ ಪ್ರಾದೇಶಿಕ ನಿರ್ದೇಶಕ ಜೆ.ಎಚ್.ನಾಯಕ್, ಉಜಿರೆ ಗ್ರಾ.ಪಂ ಅಧ್ಯಕ್ಷ ಕೆ. ಶ್ರೀಧರ ಪೂಜಾರಿ, ಉಪಸ್ಥಿತರಿದ್ದರು. ಮಂಗಳೂರು ಇ.ಎಸ್.ಐ.ಸಿ ಪ್ರಭಾರ ನಿರ್ದೇಶಕ ಎಸ್ ಶಿವರಾಮ ಕೃಷ್ಣನ್, ಮಂಗಳೂರು ಇಎಸ್‌ಐ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ| ಕೃಷ್ಣ ನಾಯ್ಕ್, ಕರ್ನಾಟಕ ಸರಕಾರ ಇಎಸ್‌ಐ ವೈದ್ಯಕೀಯ ಸೇವೆ ನಿರ್ದೇಶಕ ಡಾ| ರಾಮಕೃಷ್ಣ ಬಿ.ನಲ್ವಾರ್ ಗೌರವ ಉಪಸ್ಥಿತರಿದ್ದರು.
ಧರ್ಮಸ್ಥಳ ಎಸ್‌ಡಿಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ್ ಪೂವಣಿ, ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಕಾರ್ಯನಿರ್ವಹಣಾಧಿಕಾರಿ ಮನ್ಮಥ ಕುಮಾರ್ ಎನ್, ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.