ಎಲ್‌ಐಸಿ ಉಪಗ್ರಹ ಶಾಖಾ ವಿಮಾ ಪ್ರತಿನಿಧಿಗಳ ಸಭೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಭಾರತೀಯಾ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯ ನೂತನ ಚೀಫ್ ಮ್ಯಾನೆಜರ್ ಪಿ.ಸಿ.ನಾಯಕ್ ಜೂ.6ರಂದು ಬೆಳ್ತಂಗಡಿ ಉಪಗ್ರಹ ಶಾಖೆಗೆ ಭೇಟಿ ನೀಡಿ ಉಪಗ್ರಹ ಶಾಖಾ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಬಂಟ್ವಾಳ ಶಾಖೆಯ ಉಪ ಶಾಖಾಧಿಕಾರಿ ಸುಂದರ.ಎಂ ಉಪಸ್ಥಿತರಿದ್ದರು. ಪ್ರತಿನಿಧಿಗಳಿಗೆ ಆಯೋಜಿಸಲಾಗಿದ್ದ ಧರ್ಮಸ್ಥಳ ಕ್ಷೇತ್ರ ದರುಶನ ಹೊಸ ವ್ಯವಹಾರ ಸ್ಪರ್ಧೆಯ ವಿವರ ನೀಡಿ, ಎಲ್ಲಾ ಪ್ರತಿನಿಧಿಗಳು ಹೆಚ್ಚಿನ ವ್ಯವಹಾರ ಮಾಡಿ ಈ ಸ್ಪರ್ಧೆಗೆ ಆಯ್ಕೆಯಾಗಬೇಕು ಎಂದರು
ಉಪಗ್ರಹ ಶಾಖಾಧಿಕಾರಿ ದೇವಪ್ಪ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಎಂ.ವಿ.ಶೆಟ್ಟಿ, ಉದಯಶಂಕರ್ ಮಾತನಾಡಿ ಶುಭಕೋರಿದರು. ಅಭಿವೃದ್ಧಿ ಅಧಿಕಾರಿ ಎ.ಜಯದೇವ್, ಟಿ.ಡಿ. ರಾಘವೇಂದ್ರ, ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು. ಎಂಡಿಆರ್‌ಟಿ ಪ್ರತಿನಿಧಿ ವಿನ್ಸೆಂಟ್ ಟಿ ಡಿ’ಸೋಜಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.