HomePage_Banner_
HomePage_Banner_

ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಇಬ್ಬರು ಆರೋಪಿಗಳ ಬಂಧನ-ಇಬ್ಬರು ಪರಾರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: ಇಲ್ಲಿಯ ಕಾಜೂರು ಬಳಿ ಗೋ ಮಾಂಸ ತಯಾರಿಸುತ್ತಿದ್ದ, ಅಕ್ರಮ ಕಾಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಜೂ.4ರಂದು ಸಂಜೆ ನಡೆದಿದೆ. ದಾಳಿ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಮಿತ್ತಬಾಗಿಲು ಗ್ರಾಮದ ಕಾಜೂರು ಪಾದೆಗುತ್ತು ಬೈಲು ನಿವಾಸಿಗಳಾದ ಅಬ್ದುಲ್‌ಹಕೀಂ (42ವ) ಹಾಗೂ ಹಮೀದ್ (18ವ) ಎಂಬವರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

ಕಾಜೂರು ಮಸೀದಿ ಸಮೀಪದ ಹಳೆಕ್ಯಾಂಟೀನ್‌ನಲ್ಲಿ ನಾಲ್ಕುಮಂದಿ ಆರೋಪಿಗಳು ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸವನ್ನು ಮಾಡುತ್ತಿದ್ದು, ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಪರಾರಿಯಾದರೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿ, ಸುಮಾರು 20 ಕೆ.ಜಿಯಷ್ಟು ಕರುವಿನ ಮಾಂಸವನ್ನು ವಶಪಡಿಸಿಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ. ಅಂದು ರಾತ್ರಿ ಪೂರ್ತಿ ಈ ಅಕ್ರಮ ಕಸಾಯಿಖಾನೆಯಲ್ಲಿ ಗೋವುಗಳನ್ನು ವಧೆ ಮಾಡಿ ದೂರದ ಊರುಗಳಿಗೆ ಮಾಂಸವನ್ನು ಮಾರಾಟಕ್ಕೆ ಕಳುಹಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.