ಹೊಕ್ಕಿಲ ರಸ್ತೆಯಲ್ಲಿ ಅನಧಿಕೃತ ಡಂಪಿಂಗ್ ಯಾರ್ಡ್?! ಗಬ್ಬೆದ್ದು ನಾರುತ್ತಿದೆ ಪರಿಸರ; ಸಾಂಕ್ರಾಮಿಕ ರೋಗದ ಭೀತಿ

ಉಜಿರೆ: ಇಲ್ಲಿನ ವ್ಯಸನ ಮುಕ್ತ ಮತ್ತು ಸಂಶೋಧನಾ ಕೇಂದ್ರ (ಟಿ. ಬಿ ಸೆಂಟರ್) ಇಲ್ಲಿಂದ ಹೊಕ್ಕಿಲ ಮೂಲಕ ಸಂಪರ್ಕಿಸುವ ಅಡ್ಡ ರಸ್ತೆ ಬದಿ ಜನವಸತಿಗಿಂತ ಸ್ವಲ್ಪವೇ ದೂರದ ಸಾರ್ವಜನಿಕ ಪ್ರದೇಶದಲ್ಲಿ ಇದೀಗ ಅನಧಿಕೃತ ಡಂಪಿಂಗ್ ಯಾರ್ಡ್ ಒಂದು ನಿರ್ಮಾಣವಾದಂತಿದೆ ಇಲ್ಲಿನ ಸ್ಥಿತಿ.!
ಇಲ್ಲಿ ಕೆಲದಿನಗಳಿಂದ ಕಿಡಿಗೇಡಿಗಳ್ಯಾರೋ ರಾತ್ರಿ ಹೊತ್ತಲ್ಲಿ ಗೋಣಿ ಗೋಣಿ ತ್ಯಾಜ್ಯಗಳನ್ನು ತಂದು ಇಲ್ಲಿ ಅನಧಿಕೃತವಾಗಿ ಸುರಿದುಹೋಗುತ್ತಿದ್ದಾರೆ. ಒಣಕಸ, ಹಸಿಕಸ, ತರಕಾರಿ- ಮಾಂಸ ಇತ್ಯಾಧಿ ತ್ಯಾಜ್ಯ, ಲೆಕ್ಕವಿಲ್ಲದಷ್ಟು ಪ್ಲಾಸ್ಟಿಕ್ ಬ್ಯಾಗ್‌ಗಳು ಇಲ್ಲಿ ರಾಶಿಬಿದ್ದಿದ್ದು ಪರಿಸರದಲ್ಲಿ ವಾಸನೆ ಹಬ್ಬಿದೆ.
ನಾಯಿಗಳು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಳೆದಾಡಿ ಚೆಲ್ಲಾಪಿಲ್ಲಿಗೊಳಿಸಿದ್ದು ಇದು ಇಡೀ ಪರಿಸರದ ಅಂದಗೆಡಲೂ ಕಾರಣವಾಗಿದೆ.
ಸದ್ಯವೇ ಮಳೆಗಾಲ ಕೂಡ ಪ್ರಾರಂಭಗೊಳ್ಳಲಿದ್ದು ಮಳೆ ನೀರಿನ ಹರಿವಿನ ಜೊತೆ ಈ ತ್ಯಾಜ್ಯದ ಅಂಶಗಳು ಸೇರಿಕೊಂಡು ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಕೂಡ ಊರವರನ್ನು ಕಾಡುತ್ತಿದೆ. ಅದಕ್ಕೂ ಮುನ್ನ ಸಂಬಂಧಪಟ್ಟ ಪಂಚಾಯತ್, ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತು ಸೂಕ್ತ ಫಲಕ ಅಳವಡಿಸಿ ಎಚ್ಚರಿಕೆ ಸಂದೇಶ ನೀಡಿ ಕ್ರಮ ಜರುಗಿಸಬೇಕಾಗಿ ಜನ ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.