ದೊಂಡೋಲೆ ಸಮೀಪ ಬಾವಿಯಲ್ಲಿ ಭಾರೀ ಗಾತ್ರದ ಮೊಸಳೆ ಪತ್ತೆ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ದೊಂಡೋಲೆ ಸಮೀಪವಿರುವ ಪಾಳುಬಾವಿಯಲ್ಲಿ ಭಾರೀ ಗಾತ್ರದ ಮೊಸಳೆಯೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ದೊಂಡೋಲೆ ನಿವಾಸಿ ದಾಮೋದರ ಎಂಬವರ ಮನೆಯ ಸಮೀಪವಿರುವ ಬಾವಿಯಲ್ಲಿ ಐದೂವರೆ ಅಡಿ ಉದ್ದದ ಭಾರೀ ಗಾತ್ರದ ಮೊಸಳೆ ಕಾಣಸಿಕ್ಕಿದೆ. ನೇತ್ರಾವತಿ ನದಿ ತಟದಲ್ಲಿ ಈ ಗ್ರಾಮವಿದ್ದು, ನದಿಯಲ್ಲಿ ನೀರು ಬತ್ತಿರುವುದರಿಂದ ಆಹಾರ ಅರಸಿ ಬಂದು ಈ 15 ಅಡಿ ಆಳದ ಬಾವಿಯಲ್ಲಿ ಬಿದ್ದರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯ   ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಅರಣ್ಯ ಅಧಿಕಾರಿಗಳು ಪಿಲಿಕುಳ ನಿಸರ್ಗಧಾಮಕ್ಕೆ ಮಾಹಿತಿ ನೀಡಿದ್ದು, ಇಂದು ಮೊಸಳೆಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.