ಬೆಳ್ತಂಗಡಿ ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಬಿ.ಕೆ ಸೀತಾರಾಮ್ ರಾವ್ ನಿಧನ

Advt_NewsUnder_1
Advt_NewsUnder_1
Advt_NewsUnder_1

ಕಿಲ್ಲೂರು: ಮೂಲತಃ ಕಿಲ್ಲೂರು ಶುಭೋದಯ ಮನೆ ನಿವಾಸಿ , ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯ ಲ| ಬಿ.ಕೆ ಸೀತಾರಾಮ ರಾವ್(67.ವ) ರವರು ಹೃದಯಾಘಾತದಿಂದ ಗುರುವಾಯನಕೆರೆ ಶಕ್ತಿನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಜೂ.2 ರಂದು ನಿಧನರಾದರು.
ಇವರು ಪ್ರಗತಿಪರ ಕೃಷಿಕರಾಗಿದ್ದು, ಕೃಷಿ ಉತ್ಪನ್ನಗಳ ವ್ಯಾಪಾರಸ್ಥರೂ ಆಗಿದ್ದರು. ಇವರು 45 ವರ್ಷಗಳಿಂದ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಸದಸ್ಯರಾಗಿದ್ದು, ಅಧ್ಯಕ್ಷರಾಗಿ, ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಾಲೂಕು ಸುಬ್ರಹ್ಮಣ್ಯ ಸ್ಥಾನಿಕ ಸಭಾ ಇದರ ಅಧ್ಯಕ್ಷರಾಗಿದ್ದು, ಇದರ ಜಿಲ್ಲಾ ಸಂಘದ ನಿರ್ದೇಶಕರೂ ಆಗಿದ್ದರು.
ಮೃತರು ಪತ್ನಿ ಸರಸ್ವತಿ ಬಿ.ಕೆ, ಪುತ್ರರಾದ ಪ್ರಶಾಂತ್ ಬಿ.ಕೆ, ಪ್ರದೀಪ್ ಬಿ.ಕೆ, ಪ್ರಭಾತ್ ಬಿ.ಕೆ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಇವರ ಮೂಲಮನೆಯಾದ ಕಿಲ್ಲೂರಿನಲ್ಲಿ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.