ವೇಣೂರು ಕುಂಭಶ್ರೀ ಕಾಲೇಜು: ಪೂರ್ವಸಿದ್ದತಾ ಸಭೆ

ವೇಣೂರು: ವೇಣೂರು ನಿಟ್ಟಡೆಯ ಕುಂಭಶ್ರೀ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಮಾಹಿತಿ ಸಭೆ ಜರಗಿತು.
ಕಾಲೇಜಿನ ಪ್ರಾಚಾರ್ಯ ರಕ್ಷಿತ್ ಕುಲಾಲ್ ಅವರು ಕಾಲೇಜಿನ ಶಿಸ್ತು, ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಶೈಕ್ಷಣಿಕ ವೇಳಾಪಟ್ಟಿ, ತರಗತಿ ಅವಧಿ, ವಿಶೇಷ ತರಗತಿಗಳಾದ ನೀಟ್, ಜಿ, ಸಿ.ಎ., ಸಿ.ಟಿ.ಪಿ. ತರಬೇತಿ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ವಿದ್ಯಾ ಗೌರವ್ ಪ್ರಶಸ್ತಿ ಪುರಸ್ಕೃತ ಸಂಸ್ಥೆಯ ಸಂಚಾಲಕ ಗಿರೀಶ್ ಕೆ.ಎಚ್. ಅವರು ಕಾಲೇಜು ಬೆಳೆದು ಬಂದ ಹಾದಿ ಮತ್ತು ಫಲಿತಾಂಶಗಳ ಬಗ್ಗೆ ವಿವರಿಸಿದರು. ಕುಂಭಶ್ರೀ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಉಷಾ ಜಿ., ಉಪಮುಖ್ಯ ಶಿಕ್ಷಕಿ ಅಪರ್ಣಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಕ್ಷತಾ, ಉಪ ಮುಖ್ಯಶಿಕ್ಷಕಿ ಪವಿತ್ರ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್. ರಾವ್, ಕಾಲೇಜಿನ ಉಪನ್ಯಾಸಕ ವೃಂದ, ಕಚೇರಿ ಸಿಬ್ಬಂದಿ, ಪ್ರಯೋಗಾಲಯ ಸಹಾಯಕಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಉಪನ್ಯಾಸಕಿ ಸುಧಾ ಸ್ವಾಗತಿಸಿ, ಉಪನ್ಯಾಸಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಆಲ್ವಿನ್ ಡಿ’ಸೋಜ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.