ಎಸ್.ಡಿ.ಎಂ ಬಿ.ಎಡ್ ಕಾಲೇಜು: ವಿಶ್ವ ತಂಬಾಕು ವಿರೋಧಿ ದಿನಾಚರಣೆ

ದುಶ್ಚಟಗಳ ನಿವಾರಣೆಗೆ ಸಮುದಾಯದ ಸಹಕಾರದ ಅಗತ್ಯ

ಉಜಿರೆ: ಇಂದು ಹದಿಹರೆಯದ ಮಕ್ಕಳು ತಂಬಾಕು ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಈ ಬಗೆಗಿನ ಕಾನೂನಿನ ಅನುಷ್ಠಾನಗೊಳಿಸುವಲ್ಲಿ ಸಮುದಾಯದ ಸಹಕಾರದ ಅಗತ್ಯವಿದೆ ಎಂದು ಎಸ್.ಡಿ.ಎಂ ಬಿ.ಎಡ್ ಕಾಲೇಜಿನ ಉಪನ್ಯಾಸಕ ಪ್ರವೀಣ ಪದ್ಯಾಣ ಹೇಳಿದರು.
ಅವರು ಎಸ್.ಡಿ.ಎಂ ಬಿ.ಎಡ್ ಕಾಲೇಜಿನಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನದ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ನಿತ್ಯಾನಂದ. ಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಟ್ಕಾ, ತಂಬಾಕು ಸೇವನೆ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಎಳವೆಯ ಮಕ್ಕಳು ಆಕರ್ಷಣೆಗೊಳಗಾಗಿ ದುಶ್ಚಟಕ್ಕೆ ಬಲಿಯಾಗುತ್ತಿದ್ದು ಅವರನ್ನು ರಕ್ಷಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದರು. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ವಿದ್ಯಾಶ್ರೀ ಉಪಸ್ಥಿತರಿದ್ದರು.
ವಿದ್ಯಾರ್ಥಿ ಶಿಕ್ಷಕಿ ಮ್ಯೂರೆಲ್ ತಂಬಾಕಿನ ದುಷ್ಪರಿಣಾಮಗಳ ಬಗೆಗೆ ಪ್ರಬಂಧ ಮಂಡಿಸಿದರು. ಬಿ. ಎಡ್ ವಿದ್ಯಾರ್ಥಿಗಳು ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿಯನ್ನು ಮೂಡಿಸುವ ಕಿರು ಪ್ರಹಸನ ಪ್ರಸ್ತುತಪಡಿಸಿದರು. ವಿದ್ಯಾರ್ಥಿ ಶಿಕ್ಷಕಿ ಸುನೀತಾ ಸ್ವಾಗತಿಸಿ, ಶ್ವೇತಾ ವಂದಿಸಿದರು. ಸಹನಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.