HomePage_Banner_
HomePage_Banner_

ನರೇಂದ್ರಮೋದಿ ಪ್ರಧಾನಿಯಾಗಿ ಪ್ರಮಾಣವಚನ: ಅಭಿಮಾನಿಗಳಿಂದ ಸಂಭ್ರಮಾಚರಣೆ

ಮೋದಿ ಪ್ರಮಾಣವಚನ : ಉಜಿರೆಯಲ್ಲಿ ಸಂಭ್ರಮಾಚರಣೆ

ಉಜಿರೆ : ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಉಜಿರೆಯಲ್ಲಿ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಮೇ. 30ರಂದು ಧರ್ಮಸ್ಥಳ ಮಹಾದ್ವಾರದ ಬಳಿ ಸಮಾರಂಭದ ನೇರಪ್ರಸಾರ ವೀಕ್ಷಣೆಗೆ ಅನುಕೂಲವಾಗುವಂತೆ ಬೃಹತ್ ಎಲ್‌ಸಿಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು.

ಉಜಿರೆ: ಸತತ ಎರಡನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೊದಿಯವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನೆಲ್ಲೆಡೆ ಮೋದಿ ಅಭಿಮಾನಿಗಳಿಂದ ಸಂಭ್ರಮಾಚರಣೆ ನಡೆಯಿತು.

ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳಿಗೆ ಲಾಡು, ಬನ್ ಮತ್ತು ಚಾ ವಿತರಿಸಲಾಯಿತು. ಮೋದಿ ಚಹಾ ವಿತರಣೆಗೆ ತುಳು ಶಿವಳ್ಳಿ ಸಭಾ ಉಜಿರೆ ವಲಯಾಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉಜಿರೆಯ ಉದ್ಯಮಿಗಳಾದ ರವಿ ಚಕ್ಕಿತ್ತಾಯ, ಶ್ರೀನಿವಾಸ ಬೈಪಾಡಿತ್ತಾಯ, ಅರವಿಂದ ಕಾರಂತ್, ಮೋಹನ್ ಕುಮಾರ್, ಇಂಜೀನಿಯರ್ ಜಗದೀಶ ಪ್ರಸಾದ್, ವಿ.ಹಿಂ.ಪ.ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಬಜರಂಗದಳ ಸಂಚಾಲಕ ಸಂತೋಷ್ ಅತ್ತಾಜೆ, ಭರತ್‌ಕುಮಾರ್, ಬಾಲಕೃಷ್ಣ ಶೆಟ್ಟಿ, ಜಿ.ಪ.ಸದಸ್ಯ ಕೊರಗಪ್ಪ ನಾಯ್ಕ ಮೊದಲಾವರು ಉಪಸ್ಥಿತರಿದ್ದರು.
ಆಕರ್ಷಕ ಸಿಡಿಮದ್ದು ಹಾಗೂ ನಾಸಿಕ್ ಬ್ಯಾಂಡ್ ಪ್ರದರ್ಶನ ಏರ್ಪಡಿಸಲಾಗಿತ್ತು. ಶ್ರೀನಿವಾಸ ತಂತ್ರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸುಮಾರು 300 ಕ್ಕೂ ಹೆಚ್ಚು ಅಭಿಮಾನಿಗಳು ನೇರಪ್ರಸಾರ ವೀಕ್ಷಿಸಿ ಹರ್ಷೋದ್ಧಾರ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.