ಬೆಳ್ತಂಗಡಿ: ಇಲ್ಲಿನ ಬಸ್ಟ್ಯಾಂಡ್ ಮುಂಭಾಗದ ಸ್ಪಂದನ ಪೊಲಿ ಕ್ಲಿನಿಕ್ನಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಕಾರ್ಯಾರಂಭಿಸಿದ್ದು ಇನ್ನು ಮುಂದಕ್ಕೆ ವಾರದ ಆರೂ ದಿನಗಳಲ್ಲಿ ಮಧ್ಯಾಹ್ನ 1.00 ರಿಂದ 5.00 ರ ವರೆಗೆ ಸೇವೆ ದೊರೆಯಲಿದೆ. ಜೊತೆಗೆ ಇಸಿಜಿ, ಇಕೋ ಟೆಸ್ಟ್ ಸೌಲಭ್ಯ ಕೂಡ ಲಭಿಸಲಿದೆ.
ಅದಕ್ಕಾಗಿ ಪುತ್ತೂರಿನಿಂದ ಖ್ಯಾತ ವೈದ್ಯರಾದ ಡಾ. ಮಹಾಂತ್ ಎನ್ ಅವರು ಪ್ರತಿದಿನ ಭೇಟಿ ನೀಡಲಿದ್ದು ಅವಶ್ಯಕತೆಯುಳ್ಳವರ ಸೇವೆಗೆ ಲಭ್ಯರಿದ್ದಾರೆ. ಅಲ್ಲದೆ ಸ್ಪಂದನ ಪೊಲಿ ಕ್ಲಿನಿಕ್ನಲ್ಲಿ ಪ್ರತಿದಿನ ತಜ್ಞ ವೈದ್ಯರುಗಳಾದ ಜನರಲ್ ಫಿಸಿಸಿಯನ್ ಡಾ. ಚಂದ್ರಕಾಂತ್ (ಸಂಜೆ 5.00 ರಿಂದ 7.30), ಕಿವಿ-ಮೂಗು-ಗಂಟಲು ತಜ್ಞರಾದ ಡಾ. ತಾರಕೇಶ್ವರಿ ವಿ ಶೆಟ್ಟಿ (ಸಂಜೆ 5.00 ರಿಂದ 7.30), ಜನರಲ್ ಸರ್ಜನ್ ಡಾ. ಯೋಗೀಶ್ ಕೆ.ಜೆ, ಕನ್ಸಲ್ಟೆಂಟ್ ಕಾರ್ಡಿಯೋಲಜಿಸ್ಟ್ ಡಾ. ಜೆನು ಜೇಮ್ಸ್ ಚಾಕೋಲಾ, (ಎಲ್ಲಾ ಬುಧವಾರ 10.30 ರಿಂದ 1.00) ಮತ್ತು ಗ್ಯಾಸ್ಪ್ರೋಲಜಿಸ್ಟ್ ಸರ್ಜನ್ ಡಾ. ನಾಗಾರ್ಜುನ್ ಅವರು (ಎಲ್ಲಾ ಬುಧವಾರ ಮಧ್ಯಾಹ್ನ 1.00 ರಿಂದ 5.00 )ರ ವರೆಗೆ ಸೇವೆಗೆ ಲಭ್ಯರಿದ್ದಾರೆ. ಅಲ್ಲದೆ ಪೊಲಿ ಕ್ಲಿನಿಕ್ನಲ್ಲಿ ಪ್ರತಿದಿನ ಬೆಳಿಗ್ಗೆ 7.30 ರಿಂದ ಸಂಜೆ 7.30 ರ ವರೆಗೆ ರಕ್ತ, ಕಫ, ಮಧುಮೇಹ ಪರೀಕ್ಷೆ ಸೇವೆ ಇರಲಿದೆ.