ಉಜಿರೆ ಬೆನಕ ಹೆಲ್ತ್ ಸೆಂಟರ್ : ಫಿಸಿಯೋಥೆರಪಿ (ಭೌತಚಿಕಿತ್ಸೆ) ನೂತನ ವಿಭಾಗದ ಉದ್ಘಾಟನೆ

ಉಜಿರೆ: ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ನೂತನವಾಗಿ ಆರಂಭಗೊಂಡ ಫಿಸಿಯೋಥೆರಪಿ (ಭೌತ ಚಿಕಿತ್ಸೆ) ವಿಭಾಗವನ್ನು ಮೇ.29 ರಂದು ಮಂಗಳೂರಿನ ಪ್ರಸಿದ್ಧ ನರರೋಗ ತಜ್ಞ ರಾದ ಡಾ| ರಕ್ಷಿತ್ ಕೆ.ಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ರಕ್ಷೀತ್ ಕೆ.ಸಿ ಯವರು ದೈಹಿಕ ಚಿಕಿತ್ಸೆ, ಮೆಕ್ಯಾನಿಕಲ್ ಪೋರ್ಸ್ ಮತ್ತು ಚಲನೆಗಳು, ಹಸ್ತ ಚಾಲಿತ ಚಿಕಿತ್ಸೆ,, ವ್ಯಾಯಾಮ ಚಿಕಿತ್ಸೆ, ಎಲೆಕ್ಟ್ರೋಥೆರಪಿ, ಚಲನಶೀಲತೆ ಮತ್ತು ಕಾರ್ಯವನ್ನು ಉತ್ತೇಜಿಸುವ ಮೂಲಕ ಸಂಯೋಜಿತ ಆರೋಗ್ಯ ವೃತ್ತಿಯಲ್ಲಿ ಒಂದಾಗಿದೆ ಫಿಸಿಯೋ ಥೆರಪಿ. ಪರೀಕ್ಷೆ, ರೋಗನಿರ್ಣಯ, ಮುನ್ನರಿವು,ದೈಹಿಕ ಹಸ್ತಕ್ಷೇಪ ಮತ್ತು ರೋಗಿಯ ಶಿಕ್ಷಣದ ಮೂಲಕ ರೋಗಿಯ ಗುಣಮಟ್ಟವನ್ನು ಸುಧಾರಿಸಲು ಶಾರೀರಿಕ ಚಿಕಿತ್ಸೆ/ಫಿಸಿಯೋಥೆರಪಿ ಅತ್ಯುತ್ತಮವಾಗಿದೆ ಎಂದು ಹೇಳಿದರು.

ಆಸ್ಪತ್ರೆಯ ನಿರ್ದೇಶಕ ಡಾ| ಗೋಪಾಲಕೃಷ್ಣ ಭಟ್ ಸ್ವಾಗತಿಸಿ, 2019 ಫೆಬ್ರವರಿ 25 ರಂದು ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿರುವ ಹರ್ಷ ಎಂಬ ರೋಗಿಯನ್ನು ಮಂಗಳೂರಿನ ಖ್ಯಾತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ನೀಡಿ ಅದರ ನಂತರದ ಆರೈಕೆಗಾಗಿ ಮಾರ್ಚ್ 15 ರಂದು ಬೆನಕ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಲಾಯಿತು. ಯಾರನ್ನೂ ಗುರುತಿಸಲು ಹಾಗೂ ಸ್ವತ: ಶಾರೀರಿಕ ಚಲನೆಯನ್ನು ನಡೆಸಲಾಗದ ( bedridden ) ಇವರು ಸುಮಾರು ಒಂದು ತಿಂಗಳ ಫಿಸಿಯೋ ಚಿಕಿತ್ಸೆಯಿಂದ ಬಹುತೇಕ ತಮ್ಮ ಪೂರ್ವ ಸ್ಥಿತಿಗೆ ಮರಳಿದ್ದಾರೆ. ಇದರಿಂದ ಉತ್ತೇಜಿತ ರಾಗಿ, ಅತ್ಯಾಧುನಿಕ ಉಪಕರಣಗಳೊಂ ದಿಗೆ ಫಿಸಿಯೋಥರಪಿ ವಿಭಾಗವನ್ನು ಪ್ರಾರಂಭಿಸಿರುವುದಾಗಿ ತಿಳಿಸಿ ಹಾಗೂ ಇನ್ನುಮುಂದೆ ಫಿಸಿಯೋಥೆರಪಿ ಸೌಲಭ್ಯವು ನಮ್ಮ ಆಸ್ಪತ್ರೆಯಲ್ಲಿ ಪ್ರತಿದಿನ ಲಭ್ಯವಿರುವುದಾಗಿ ಹೇಳಿದರು.

ಈ ಕಾರ್ಯಕ್ರಮದಲಿ ಡಾ.ಭಾರತಿ, ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆಯರಾದ ಡಾ.ಕೆ ರಾಧಿಕಾ, ಡಾ.ವಿನಯಾ ಕಿಶೋರ್, ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕರಾದ  ದೇವಸ್ಯ ವರ್ಗೀಸ್ ,ಪಿಸಿಯೋಥೆರಪಿಸ್ಟ್ ಕು.ರೋಸ್ ಮೇರಿ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ.ಎಸ್.ಜಿ ಭಟ್ ಇವರು ನಿರ್ವಹಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.