ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಜ್ಯೋತಿಷ್ಯ ಜ್ಞಾನರತ್ನ, ಯಕ್ಷದೇವ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಲ್ಲೋರ್ವರಾಗಿದ್ದ ಅನಂತರಾಮ ಭಂಡಾರಿ ಬಂಗಾಡಿಯವರಿಗೆ ಶ್ರದ್ಧಾಂಜಲಿ ಸಭೆಯು ಇಂದು (ಮೇ.28) ಬೆಳ್ತಂಗಡಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರುಗಿತು.
ಮಾಜಿ ಶಾಸಕ ವಸಂತ ಬಂಗೇರ, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಯೋಗೀಶ್ ಕೈರೋಡಿ, ಯಕ್ಷಗಾನ ಕಲಾವಿದರಾದ ದಾಸಪ್ಪ ರೈ, ಅರುವ ಕೊರಗಪ್ಪ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ವಾಣಿ ಕಾಲೇಜು ಪ್ರಾಂಶುಪಾಲ ಡಿ.ಯದುಪತಿ ಗೌಡ, ಚಿಂತಕ ಲಕ್ಷ್ಮೀಶ ಕೊಲ್ಪಾಡಿ, ಪ್ರಕಾಶ್ ಭಂಡಾರಿ, ಪೂವರಿ ತುಳು ಮಾಡ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಭಂಡಾರಿ, ಯಕ್ಷಗಾನ ಕಲಾವಿದ ಗಂಗಾಧರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನಂತರಾಮ ಭಂಡಾರಿ ಬಂಗಾಡಿಯವರು ರಚಿಸಿದ ಯಕ್ಷಗಾನ ಹಾಗೂ ಹಾಡುಗಳನ್ನು ಹಾಡಿ ನುಡಿನಮನ ಸಲ್ಲಿಸಲಾಯಿತು.
ಪತ್ನಿ ಸುಮತಿ, ಮಕ್ಕಳಾದ ಸಂದೇಶ್ ಭಂಡಾರಿ ಮತ್ತು ಸಂಧ್ಯಾ ಹಾಗೂ ಕುಟುಂಬವರ್ಗದವರು ಆಹ್ವಾನಿತರನ್ನು ಬರಮಾಡಿಕೊಂಡು ಗೌರವ ಸಲ್ಲಿಸಿದರು.