ಡಿಕೆಆರ್‌ಡಿಎಸ್ ನಿಂದ ವಾರ್ಷಿಕ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಕ್ಕಳ ಬೇಸಿಗೆ ಶಿಬಿರ: ಪುಸ್ತಕ, ಪೌಷ್ಠಿಕ ಆಹಾರ ವಿತರಣೆ

ಬೆಳ್ತಂಗಡಿ: ಡಿಕೆಆರ್‌ಡಿಎಸ್ ನೇತೃತ್ವದಲ್ಲಿ ಸಂಸ್ಥೆ ಈಗಾಗಲೇ ಗುರುತಿಸಿ, ಪೋಶಿಸಿ ಸಂರಕ್ಷಿಸುತ್ತಿರುವ ಎಚ್‌ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ರಜಾ ಕಾಲದ ವಿಶೇಷ ಪ್ರೋತ್ಸಾಹ ಶಿಬಿರ ಮತ್ತು ಪುಸ್ತಕ ವಿತರಣೆ ಇತ್ತೀಚೆಗೆ ಸಂತೋಮ್ ಟವರ್ ಬೆಳ್ತಂಗಡಿ ಇಲ್ಲಿನ ಸಭಾಂಗಣದಲ್ಲಿ ಜರುಗಿತು.
ಶಿಬಿರದ ಉದ್ಘಾಟನೆಯನ್ನು ವಂ.ಫಾ ಟೋಮಿ ಕಲ್ಲಿಕಾಟ್ ನೆರವೇರಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಂ. ಫಾ. ಜೋಸ್ ವಲಿಯಪರಂಬಿಲ್ ವಹಿಸಿದ್ದರು. ಮಂಗಳೂರು ಸಂತ ಅಲ್ಫೋನ್ಸಾ ಚರ್ಚ್ ಧರ್ಮಗುರುಗಳಾದ ಸೆಬಾಸ್ಟಿಯನ್ ಚೇಲಕ್ಕಪಳ್ಳಿಲ್ ಮಕ್ಕಳಿಗೆ ಪುಸ್ತಕ ವಿತರಿಸಿ ಶುಭ ಕೋರಿದರು. ಪತ್ರಕರ್ತ ಚೈತ್ರೇಶ್ ಬಾಧಿತ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸಿದರು.
ಅನ್ನಾ ಕಲೆಕ್ಷನ್ ಮುಂಡಾಜೆ ಇದರ ಮಾಲಕ ಪಿ.ಸಿ ಸೆಬಾಸ್ಟಿಯನ್ ಮಕ್ಕಳಿಗೆ ಬಟ್ಟೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಉಷಾ ಕಾಮತ್, ಮಾರ್ಕ್ ಡಿಸೋಜಾ, ರಾಜೇಶ್, ಶಿಬಿರ ನಡೆಸಿಕೊಟ್ಟರು. ಮಕ್ಕಳಿಗೆ ವಿವಿಧ ಆಟ ಮತ್ತು ಚಟುವಟಿಕೆಗಳನ್ನು ನಡೆಸಿದರೆ, ವಿಜೇಶ್ ಬಿಳಿನೆಲೆ ಯೋಗಾಭ್ಯಾಸ ಮಾಡಿಸಿದರು. ಜ್ಯೋತಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಿ ಅನುಜಾ ವೈದ್ಯಕೀಯ ತಪಾಸಣೆ ನಡೆಸಿದರು. ಸಂಸ್ಥೆಯ ನಿರ್ದೇಶಕ ವಂ. ಫಾ ಬಿನೋಯ್ ಎ.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾ ಸಂಯೋಜಕಿ ಸಿಸಿಲ್ಯಾ ತಾವ್ರೋ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.