ಮೆಸ್ಕಾಂ ಬಿಲ್ ಬಾಕಿ 8 ಸಾವಿರ… ಕಚೇರಿಗೆ ಹೋಗಿ ಕೇಳುವಾಗ 4 ಸಾವಿರ?!

ಬೆಳ್ತಂಗಡಿ: ಮೆಸ್ಕಾಂ ಇಲಾಖೆ ಜನತೆಗೆ ಗುಣಮಟ್ಟದ ಸೇವೆ ನೀಡಲೆಂದು ಕಾಲಕಾಲಕ್ಕೆ ಮೇಲ್ದರ್ಜೆಗೇರುತ್ತಲೇ ಬಂದರೂ ತಾಂತ್ರಿಕ ತೊಂದರೆ ಮತ್ತು ಜನತೆಯನ್ನು ಸಮಾಧಾನಪಡಿಸುವಲ್ಲಿ ಇನ್ನೂ ಎಡವಿದೆ ಎಂಬುದು ಇನ್ನೊಂದು ಮಾತು…
ಗ್ರಾಹಕರೊಬ್ಬರಿಗೆ 8 ಸಾವಿರ ಬಾಕಿ ಎಂದು ಫ್ಯೂಸ್ ಕಿತ್ತು ತಂದು, ಅವರು ವಿಚಾರಣೆಗೆಂದು ಕಚೇರಿಗೆ ಬಂದರೆ ಏಕಾಏಕಿ 4 ಸಾವಿರಕ್ಕೆ ಇಳಿಸಿದ ವಿದ್ಯಮಾನ ನಡೆದಿದೆ. ಬೆಳ್ತಂಗಡಿ ಸಂಜಯನಗರದ ದಿನೇಶ್ ರಾವ್ ಅವರ ಹಳೆ ಮೀಟರ್ ಬದಲಾಯಿಸಿ ಡಿಜಿಟಲ್ ಮೀಟರ್ ಅಳವಡಿಸಿದ ನಂತರ ಬಿಲ್‌ನಲ್ಲಿ ವ್ಯತ್ಯಯವಾಗಿ ಅವಾಂತರಕ್ಕೆ ಕಾರಣವಾಗಿದೆ. ಅವರು ನಿಗದಿತ ದಿನಾಂಕಕ್ಕೇ ಹಣ ಪಾವತಿಸುವ ಗ್ರಾಹಕ. ಆದರೆ ಅವರ ಮನೆಗೆ ಬಂದ ಲೈನ್‌ಮೇನ್‌ಗಳು 8 ಸಾವಿರ ಬಾಕಿ ಇದೆ ಎಂದು ಏಕಾಏಕಿ ಫ್ಯೂಸ್ ಕಿತ್ತು ತಂದಿದ್ದಾರೆ. ಅವರು ಕಚೇರಿಗೆ ಹೋಗಿ ವಿಚಾರಿಸುವಷ್ಟರಲ್ಲಿ ಬಾಕಿ ಇದ್ದ8 ಸಾವಿರ ಒಮ್ಮಲೇ 4 ಸಾವಿರಕ್ಕೆ ಇಳಿದಿದೆ…
ಅವರು ಕಚೇರಿಗೆ ಸಂಪರ್ಕ ಮಾಡಿದ್ದರೂ ಫ್ಯೂಸ್ ಕಿತ್ತು ತಂದದ್ದಕ್ಕಾಗಿ ಅವರು ಮಾಜಿ ಶಾಸಕ ವಸಂತ ಬಂಗೇರ ಅವರಲ್ಲಿ ದೂರಿಕೊಂಡು, ಅವರು ಎಇಇ ಅವರಿಗೆ ಕರೆಮಾಡಿದ ನಂತರ ಇನ್ನೂ ಕಡಿಮೆ ಮಾಡಲು ಪರಿಶೀಲನೆಯ ಭರವಸೆ….!
ಇದು ಮೆಸ್ಕಾಂ ಇಲಾಖೆಯ ವಂಚನೆಯೇ ಎಂಬುದು ಅವರಲ್ಲಿ ಮೂಡಿರುವ ಪ್ರಶ್ನೆ?: ನಾನಾಗಿರುವುದರಿಂದ ವಿಚಾರಣೆಗೆ ಮುಂದಾದೆ. ಬೇರೆ ಯಾರಾದರೂ ಹಣ ಕಟ್ಟಿ ಎಂದು ಹೇಳಿದರೆ ಹಾಗೇ ಕಟ್ಟಿ ಬಂದರೆ ಅದು ಗ್ರಾಹಕರಿಗೆ ವಂಚನೆಯಲ್ಲದೆ ಇನ್ನೇನು ಎಂದು ಅವರು ಪ್ರಶ್ನಿಸುತ್ತಾರೆ. ಇನ್ನೂ ಅನೇಕರಿಗೆ ಇದೇ ರೀತಿ ಆಗುತ್ತಿದೆ ನೇರ ಹಣ ಕಟ್ಟುವ ಮುನ್ನ ಒಮ್ಮೆ ವಿಚಾರಿಸಿದರೆ ಉತ್ತಮ ಎಂಬುದು ಅವರ ಅಭಿಪ್ರಾಯ…

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.