ವೀರಕೇಸರಿ ಬೆಳ್ತಂಗಡಿಯಿಂದ ಬಡಕುಟುಂಬಕ್ಕೆ ವೈದ್ಯಕೀಯ ನೆರವು

ಬೆಳ್ತಂಗಡಿ: ವೀರಕೇಸರಿ ಬೆಳ್ತಂಗಡಿ ಸಂಘಟನೆಯು ಕಳೆದ 2 ವರ್ಷ ಮುಗಿಸಿ ಮೂರನೇ ವರ್ಷದ 10ನೇ ತಿಂಗಳಲ್ಲಿ 83 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 2 ನೇ ವರ್ಷದ ಪಯಣ ಮುಗಿಸಿ 3 ನೇ ವರ್ಷದ ಪಯಣದಲ್ಲಿ 2 ಕುಟುಂಬಕ್ಕೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ.
82ನೇ ಸೇವಾಯೋಜನೆಯಾಗಿ ಕಾರ್ಕಳದ ಬೆಳುವಾಯಿ ಗ್ರಾಮದ ಕರಿಯಣ್ಣಂಗಡಿ ಮನೆ ನಿವಾಸಿ ಸೋಮನಾಥ್ ರವರ ಪತ್ನಿಯ ಅನಾರೋಗ್ಯ ಮತ್ತು ಇವರ ಪುಟ್ಟ ಮಗುವಿನ ಸೀಳುತುಟಿ ಶಸ್ತ್ರಚಿಕಿತ್ಸೆಗಾಗಿ 15 ಸಾವಿರ ರೂಗಳ ಚೆಕ್‌ನ್ನು ಹಸ್ತಾಂತರಿಸಲಾಯಿತು.
83 ನೇ ಸೇವಾಯೋಜನೆಯಾಗಿ ಮಂಗಳೂರಿನ ವಾಮಂಜೂರು ಅಮೃತ ನಗರ ಮನೆ ನಿವಾಸಿ ಸುದರ್ಶನ್‌ರವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗಾಗಿ 15 ಸಾವಿರ ರೂ.ಗಳ ಚೆಕ್‌ನ್ನು ಹಸ್ತಾಂತರಿಸಲಾಯಿತು
ಈ ಸಂದರ್ಭದಲ್ಲಿ ಭಾರತೀಯ ಭೂಸೇನೆಯ ವೀರಯೋಧ ಥೋಮಸ್ ಫಿಲಿಪ್ ಹಾಗೂ ವೀರಕೇಸರಿ ತಂಡದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.