ಡ್ರೋನ್ ನಿರ್ಮಿತ “ಇಸ್ಪಾಗ್ರೋ ರೋಬೋಟಿಕ್ ಕಂಪೆನಿ”ಗೆ ಹಾಂಕಾಂಗ್ ಮೂಲದ ಸಂಸ್ಥೆಯಿಂದ ಸಹಾಯಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಟಾರ್ಟ್‌ಅಪ್‌ಗೆ ಮಾನ್ಯತೆ

ಬೆಳ್ತಂಗಡಿ: ವಿಶೇಷ ಉದ್ಧೇಶಗಳಿಗಾಗಿ ಡ್ರೋನ್ ನಿರ್ಮಿಸುವ ಬೆಳ್ತಂಗಡಿ ತಾಲೂಕಿನ ಕಂಪೆನಿಯು ಇದೀಗ ಹಾಂಕಾಂಗ್ ಮೂಲದ ಬಿಆರ್‌ಐಎನ್‌ಸಿ ಎಂಬ ಉತ್ತೇಜನಾ ಸಂಸ್ಥೆಯಿಂದ ಗುರುತಿಸಲ್ಪಟ್ಟು ವಿಶೇಷ ಸಹಾಯಧನವನ್ನು ಪಡೆದಿದೆ.
ಜಾಗತಿಕ ಮಟ್ಟದಲ್ಲಿ ಸುಮಾರು 400 ಡ್ರೋನ್ ಕಂಪೆನಿಗಳ ಪೈಕಿ ಈ ಸಂಸ್ಥೆಯು ಆಯ್ಕೆಯಾಗಿದೆ. ಕೇವಲ ನಾಲ್ಕು ರೋಬೋಟಿಕ್ ಮತ್ತು ಡ್ರೋನ್ ಸಂಸ್ಥೆಗಳನ್ನು ಕಂಪೆನಿ ತನ್ನ ಉತ್ತೇಜನಾ ಕಾರ್ಯಕ್ರಮಗಳಿಗೆ ಆಯ್ಕೆಮಾಡಿಕೊಂಡಿದೆ. ಈ ಕಂಪೆನಿಯು ಹಾಂಕಾಂಗ್‌ನಲ್ಲಿ ನಡೆಯುವ 4 ತಿಂಗಳ ವೇಗವರ್ಧಕ ಕಾರ್ಯಕ್ರಮದಲ್ಲಿ ಈಗಾಗಲೇ ಪಾಲ್ಗೊಂಡಿರುತ್ತದೆ.
ಜಿಲ್ಲೆಯ ಮೊದಲ ನೊಂದಾಯಿತ ಸಂಸ್ಥೆ:
ಇಸ್ಪಾಗ್ರೋ ರೋಬೋಟಿಕ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯು ದ.ಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ನೊಂದಾಯಿತವಾಗಿರುವ ಸಂಸ್ಥೆ. ಈ ಕಂಪೆನಿಯು ಈಗಾಗಲೇ ನಾಲ್ಕು ಮಾದರಿಯ ವಿವಿಧೋದ್ಧೇಶ ಡ್ರೋನ್ ತಯಾರಿಸಿದ್ದು ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ಕೊಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸ್ಟಾರ್ಟ್‌ಆಪ್ ಕಂಪೆನಿಯು ಈಗಾಗಲೇ ಎಂಆರ್‌ಪಿಎಲ್, ಒಎನ್‌ಜಿಸಿ ಕಂಪೆನಿಯಿಂದ ಕೆಲವು ತಿಂಗಳುಗಳ ಹಿಂದೆ ಐಐಎಮ್ ಕೋಝಿಕ್ಕೂಡ್‌ನಲ್ಲಿ ಸಹಾಯಧನವನ್ನೂ ಪಡೆದುಕೊಂಡಿದೆ.
“ಬ್ರಿಂಕ್” ನಿಂದ 50 ಲಕ್ಷ ರೂ ಸಹಾಯಧನ:
ಈ ಸ್ಟಾರ್ಟ್‌ಅಪ್ ಕ್ಯಾಂಪ್ಕೂ ಮತ್ತು ಎಂಐಟಿ ಮಣಿಪಾಲ ಸಂಸ್ಥೆಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಮುಂದಿನ ಕೆಲಸಕಾರ್ಯಗಳಿಗಾಗಿ ಈಗಾಗಲೇ ಪಡೆದುಕೊಂಡಿರುತ್ತದೆ. ಪ್ರಸಕ್ತ ವರ್ಷದಲ್ಲಿ ೫೦ ಲಕ್ಷ ಸಹಾಯಧನವನ್ನು “ಬ್ರಿಂಕ್” ನಿಂದ ಪಡೆದುಕೊಂಡಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.