ಪ. ಪೂ ಕಾಲೇಜು ಆರಂಭ

ಮೊದಲ ದಿನವೇ ಲವಲವಿಕೆಯಿಂದ ಕಾಲೇಜಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

ಬೇಸಿಗೆ ರಜೆ ನಂತರ 2019-20 ಸಾಲಿನ ಪದವಿ ಪೂರ್ವ ತರಗತಿಗಳು ಮೇ. 21 ರಿಂದ ತಾಲೂಕಿನಾಧ್ಯಂತ ಆರಂಭಗೊಂಡಿತು.
ಎಸ್ಸೆಸ್ಸೆಲ್ಸಿ ಪೂರ್ತಿಗೊಳಿಸಿ ಈಗಷ್ಟೇ ಕಾಲೇಜು ಮೆಟ್ಟಿಲು ಏರಿರುವ ವಿದ್ಯಾರ್ಥಿಗಳು ಲವಲವಿಕೆಯಿಂದ ಮೊದಲ ದಿನ ಕಾಲೆಜು ಕಡೆ ಹೆಜ್ಜೆ ಹಾಕಿದರು. ಬಹುತೇಕ ಕಡೆ ತಮ್ಮ ಮಕ್ಕಳನ್ನು ಕಾಲೇಜಿಗೆ ಬಿಡಲು ತಂದೆ ತಾಯಿ ಕೂಡ ಆಗಮಿಸಿದ್ದರಿಂದ ಕಾಲೇಜು ಕ್ಯಾಂಪಸ್‌ಗಳು ಜಾತ್ರೆಯ ಸನ್ನಿವೇಶದಂತೆ ಕಂಡುಬರಲು ಕಾರಣವಾಯಿತು.
 ಕಾಲೇಜು ಆರಂಭ:
ದ್ವಿತೀಯ ಪಿಯುಸಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿಗೆ ಬಂದಿದ್ದರೆ, ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆದವರಲ್ಲಿ ದೂರದ ಊರುಗಳಿಂದ ಬರುವವರ ಸಂಖ್ಯೆ ಕೊಂಚ ವಿರಳವಾಗಿತ್ತು. ಕೆಲವೆಡೆ ಕಾಲೇಜುಗಳಲ್ಲಿ ಇನ್ನೂ ಕೂಡ ದಾಖಲಾಗಿ ಪ್ರಕ್ರೀಯೆಗಳು ನಡೆಯುತ್ತಿವೆ.
ತಾಲೂಕಿನಲ್ಲಿ 21 ಪ. ಪೂ ಕಾಲೇಜುಗಳು:
ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರಿ ಮತ್ತು ಖಾಸಗಿ ಸೇರಿ ಒಟ್ಟು 21 ಪ. ಪೂ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಕಲಾ ವಿಭಾಗ, ವಾಣಜ್ಯ ವಿಭಾಗ, ಮತ್ತು ವಿಜ್ಞಾನ ವಿಭಾಗಗಳು ಇಲ್ಲಿದ್ದು, ಕೆಲವು ಕಡೆ ಕಲಾ ಮತ್ತು ವಾಣಿಜ್ಯ ವಿಭಾಗ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕಳೆದ ಬಾರಿಯ ಫಲಿತಾಂಶದಲ್ಲಿ 80 ಶೇ.ಕಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.