ವೇಣೂರು: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಾರಾವಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ನಾರಾವಿ ಗ್ರಾಮದ ಗುಂಡ್ಯರೋಡಿ ಚಾರ್ಲ್ಸ್ ಪಿರೇರಾ ಅವರ ಪುತ್ರ ಸಂತೋಷ್ ರಂಜಿತ್ ಪಿರೇರಾ (37) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಮೂರು ತಿಂಗಳಿನಿಂದ ಇವರಿಗೆ ಪಿತ್ತಕೋಶದ ಕಾಯಿಲೆ ಇದ್ದು, ಮಂಗಳೂರಿನ ಕೆಲವು ಆಸ್ಪತ್ರೆಗಳಿಂದ ಚಿಕಿತ್ಸೆಯನ್ನೂ ಮಾಡಿಕೊಂಡಿದ್ದರು. ಪ್ರತಿ ದಿನ ತೋಟಕ್ಕೆ ಕೆಲಸಕ್ಕೆ ಹೋಗಿ ಮಧಾಹ್ನದ ಒಳಗೆ ಬರುತ್ತಿದ್ದರು. ಆದರೆ ಮಂಗಳವಾರ ತೋಟಕ್ಕೆ ಹೋದವರು ವಾಪಾಸ್ ಬರದೇ ಇದ್ದುದರಿಂದ ಅವರ ಪತ್ನಿ ಹುಡುಕಿಕೊಂಡ ಹೋದ ಸಂದರ್ಭ ತೋಟದ ಪಂಪ್ಶೆಡ್ನ ಛಾವಣಿಯ ಪಕ್ಕಾಸಿಗೆ ಹಗ್ಗವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಲಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.