ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ತೀವ್ರ ತೊಂದರೆ

Advt_NewsUnder_1
Advt_NewsUnder_1

ನಾವೂರು ಭಾಗಕ್ಕೆ ಪ್ರತ್ಯೇಕ ಸಬ್‌ಸ್ಟೇಷನ್‌ಗೆ ಹೆಚ್ಚಿದ ಒತ್ತಾಯ

* ನೂರಾರು ಗ್ರಾಹಕರಿಂದ ಮೆಸ್ಕಾಂ ಎಇಇ ಮೂಲಕ ಇಂಧನ ಸಚಿವರಾದ ಸಿಎಂ ಗೆ ಮನವಿ
* ಎಲ್ಲ ಜಾತಿ ಧರ್ಮ ಪಕ್ಷದವರಿಂದ ಒಗ್ಗಟ್ಟು ಪ್ರದರ್ಶನ
* ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರರನ್ನೂ ಭೇಟಿಯಾಗಿ ಸಮಸ್ಯೆ ಹೇಳಿಕೊಂಡ ನಿಯೋಗ
* ನೀತಿ ಸಂಹಿತೆ ಮುಗಿದ ಬಳಿಕ ೬೫ ಲಕ್ಷ ರೂ. ವೆಚ್ಚದಲ್ಲಿ ಹೊಸ ಫೀಡರ್‌ಗೆ ಅಗತ್ಯ ಕ್ರಮದ ಭರವಸೆ
* ಮುಂದಿನ ವರ್ಷದ ಹೊಸ ಸಬ್‌ಸ್ಟೇಷನ್ ಪಕ್ಕಾ ಎಂಬುದಾಗಿ ಮೆಸ್ಕಾಂ ಇಲಾಖೆ ಮಾಹಿತಿ

ಬೆಳ್ತಂಗಡಿ: ಬಹುತೇಕ ಕೃಷಿಕರೇ ಇರುವ ನಾವೂರು ಗ್ರಾಮದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳಿದ್ದರೂ ಇದೀಗ ತೀವ್ರ ಲೋಡ್‌ಶೆಡ್ಡಿಂಗ್ ಸಮಸ್ಯೆ ಎದುರಾಗಿರುವುದರಿಂದ ನಮ್ಮ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರಕಿಸಿಕೊಡಬೇಕು. ಒಂದೋ ಈ ಭಾಗಕ್ಕೆ ಅನುಕೂಲವಾಗುವಂತೆ ಸಬ್‌ಸ್ಟೇಷನ್ ನಿರ್ಮಾಣ, ಅಥವಾ ಎಕ್ಸ್‌ಪ್ರೆಸ್ ಫೀಡರ್ ಅಳವಡಿಕೆ, ದಿನಕ್ಕೆ 12 ಗಂಟೆಯಾದರೂ ಪವರ್‌ಕಟ್ ಇಲ್ಲದ ಗುಣಮಟ್ಟದ ತ್ರೀಫೇಸ್ ವಿದ್ಯುತ್ ಸೌಲಭ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ನಡ, ಕನ್ಯಾಡಿ, ನಾವೂರು ಮತ್ತು ಇಂದಬೆಟ್ಟು ಗ್ರಾಮಸ್ಥರು ನೂರಾರು ಮಂದಿ ನಿಯೋಗದ ಮೂಲಕ ಮೆಸ್ಕಾಂ ಅಧಿಕಾರಿಯನ್ನು ಮೇ. 20 ರಂದು ಭೇಟಿಮಾಡಿ ಮನವಿ ನೀಡುವ ಮೂಲಕ ಇಲಾಖೆಯ ಗಮನ ಸೆಳೆದರು.
ಮೂಲಭೂತ ಸೌಲಭ್ಯಗಳಿದ್ದರೂ ತೀವ್ರಗೊಂಡಿರುವ ವಿದ್ಯುತ್ ಸಮಸ್ಯೆ:
ಈ ಮೇಲಿನ ನಾಲ್ಕೂ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. 1 ಸಾವಿರದಷ್ಟು ಕುಟುಂಬಗಳು ಕುಡಿಯುವ ನೀರಿಗಾಗಿ ಗ್ರಾ.ಪಂ ನೀರನ್ನೇ ಅವಲಂಬಿಸಿದ್ದಾರೆ. ಅಂಗನವಾಡಿ ಕೇಂದ್ರಗಳು, ಶಾಲಾ ಕಾಲೇಜುಗಳು, ಸರ್ವಧರ್ಮೀಯರ ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಚರ್ಚ್, ಮಸ್ಜಿದ್, ಭಜನಾ ಮಂದಿರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪಶುವೈದ್ಯಕೀಯ ಕೇಂದ್ರಗಳು, ಮಿಲ್ಕ್ ಸೊಸೈಟಿ, ಮೊಬೈಲ್ ಟವರ್‌ಗಳು, ಒಂದು ಸಾವಿರಕ್ಕೂ ಅಧಿಕ ಪಂಪು ಸೆಟ್‌ಗಳು ಇವೆಲ್ಲಾ ಇವೆ. ಇವುಗಳಿಗೆಲ್ಲಾ ಅನುಕೂಲವಾಗಿರುವ ವಿದ್ಯುತ್ ಸಮಸ್ಯೆಯಿಂದಾಗಿ ಕೃಷಿ ಬಹುತೇಕ ನಷ್ಟವಾಗಿದೆ.
6 ಗಂಟೆ ಮಾತ್ರ ತ್ರೀ ಫೇಸ್; ಅದರಲ್ಲಿ 10 ಬಾರಿ ಪವರ್ ಕಟ್:
ಇಷ್ಟೆಲ್ಲಾ ಸೌಲಭ್ಯಗಳು ನಮ್ಮಲ್ಲಿದ್ದರೂ ಇದೀಗ ದಿನದ 24 ಗಂಟೆಯಲ್ಲಿ 6 ಗಂಟೆ ಮಾತ್ರ ತ್ರೀಫೇಸ್ ವಿದ್ಯುತ್ ಇದೆ. ಅದರಲ್ಲೂ 10 ಬಾರಿ ಪವರ್ ಕಟ್ಟ್ ಆಗುತ್ತಲಿದ್ದು, ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ನಮ್ಮತ್ತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ನೀಡುವ ವೇಳೆ ನಾವೂರು ಆಯಿಲ್ ಮಿಲ್ ಮಾಲಿಕ ಸೆಬಾಸ್ಟಿನ್ ವಿ.ಪಿ, ಗ್ರಾ.ಪಂ ಸದಸ್ಯ ಹರೀಶ್ ಮೂರ್ತಾಜೆ, ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ, ಸುರೇಶ್ ನಾವೂರು, ಮಿಲ್ಕ್ ಸೊಸೈಟಿ ನಿರ್ದೇಶಕ ಅಜಿತ್ ಆರಿಗಾ, ಸಾಲ್ಯಾನ್ ಎಂಟರ್‌ಪ್ರೈಸಸ್ ಮಾಲಕ ಅಭಿನಂದನ್ ಹರೀಶ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್ ಬಂಗಾಡಿ, ಲಾಲ ಗ್ರಾ.ಪಂ ಸದಸ್ಯ ಮೋಹನ್‌ದಾಸ್ ಭೈರ, ಸ್ವರೂಪ್ ನಾವೂರು, ದೇಜಪ್ಪ ಕುಂಡಡ್ಕ, ರವಿರಾಜ್ ಜೈನ್, ಗೋವಿಂದ ಮೂಲ್ಯ, ಶ್ರೀನಿವಾಸ, ಸಂಪಕ್ಕ ಪೂಜಾರಿ, ವಸಂತ, ಜೋಸ್ ಸಿ.ಟಿ, ಜೈಶನ್, ಆಂಟನೊ ವಿ.ಪಿ, ಉದಯ್, ಆನಂದ, ವಿಜಯ ಕುಲಾಲ್, ಮನೋಹರ್ ವಿ.ಆರ್, ಅಬ್ರಾಹಾಂ ಕಿಲ್ಲೂರು, ರಮೇಶ್ ಕಣಾಲು, ಇಸುಬು ಮೊದಲಾದವರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.