ಉಜಿರೆ ಎಸ್‌ಡಿಯಂ ಇಂಜಿನಿಯರಿಂಗ್ ಕಾಲೇಜಿಗೆ 1.20 ಕೋಟಿ ರೂ. ಅನುದಾನ

ಕರ್ನಾಟಕ ಸರಕಾರದ  ಕೆ-ಟೆಕ್ ನ್ಯೂ ಏಜ್ ಇನ್ಕುಬೇಶನ್ ನೆಟ್‌ವರ್ಕ್ ಯೋಜನೆ ಮೂಲಕ ಮಂಜೂರು

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಧಿಗಳ ಆಯ್ದ ಪ್ರೋಜೆಕ್ಟ್‌ಗಳಿಗೆ ಮುಂದಿನ ಮೂರು ವರ್ಷಗಳ ಕಾಲ ಒಂದು ಕೋಟಿ ಇಪ್ಪತ್ತು ಲಕ್ಷ ರೂ. ಅನುದಾನವನ್ನು ಕರ್ನಾಟಕ ಸರಕಾರವು ಕೆ-ಟೆಕ್ ನ್ಯೂ ಏಜ್ ಇನ್ಕುಬೇಶನ್ ನೆಟ್‌ವರ್ಕ್ ಯೋಜನೆ ಮುಖಾಂತರ ಒದಗಿಸಲಿದೆ.
ಆ ಪ್ರಯುಕ್ತ ಕರ್ನಾಟಕ ಇನೊವೇಶನ್ ಆಂಡ್ ಟೆಕ್ನೋಲೊಜಿ ಸೊಸೈಟಿ (ಕೆಐಟಿಎಸ್) ವಿಭಾಗದ ಕೌಶಲ್ಯಾಭಿವೃದ್ದಿ ಕಾರ್ಯಕ್ರಮದ ಅಧ್ಯಕ್ಷೆ ಡಾ| ಸಂಧ್ಯಾ ಅಣ್ವೇಕರ್ ಭೇಟಿ ನೀಡಿ, ಕಾಲೇಜಿನ ಇನೊವೇಶನ್ ಲ್ಯಾಬ್ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ನೂತನ ಸಂಶೋಧನೆಗಳನ್ನು ಕೈಗೆತ್ತಿಕೊಂಡು, ಮಾರುಕಟ್ಟೆಗೆ ತಕ್ಕಂತ ಉತ್ಪನ್ನವನ್ನಾಗಿಸುವ ನಿಟ್ಟಿನಲ್ಲಿ ಈ ಅನುದಾನ ಸಹಾಕಾರಿಯಾಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಅಶೋಕ್ ಕುಮಾರ್ ತಿಳಿಸಿದರು. ಈಗಾಗಲೆ ಐಡಿಯಾ ಜನರೇಶನ್ ಹ್ಯಾಕಥಾನ್ ಸ್ಪರ್ಧೆ ನಡೆದಿದ್ದು ಇದರಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಎಸ್‌ಡಿಎಂ ಐಟಿ ಕಾಲೇಜು ಕಟ್ಟಡ ಉತ್ತಮ ಗುಣಮಟ್ಟದ್ದಾಗಿದ್ದು ಪ್ರಾಕೃತಿಕ ಸೌಂದರ್ಯ ಹೊಂದಿದೆ. ಜೊತೆಗೆ ವಿದ್ಯಾರ್ಥಿಗಳ ಕಲಿಕಗೆ ಪೂರವಾಗಿ ಉತ್ಕೃಷ್ಟ ವಾತಾವರಣ ಹೊಂದಿದೆ. ಅಗತ್ಯ ಪರಿಕರಗಳು, ಲೇಬ್‌ಗಳು ಇಲ್ಲಿನ ವಿಶೇಷತೆಗಳಾಗಿದ್ದು, ಇದು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಡಾ| ಸಂಧ್ಯಾ ಅಣ್ವೇಕರ್, ಅಧ್ಯಕ್ಷರು ಕರ್ನಾಟಕ ಇನೊವೇಶನ್ ಆಂಡ್ ಟೆಕ್ನೋಲೊಜಿ ಸೊಸೈಟಿ (ಕೆಐಟಿಎಸ್) ವಿಭಾಗದ ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.