ಬೆಳ್ತಂಗಡಿಯಲ್ಲಿ “ವಿದ್ಯಾಮಾತಾ” ಉದ್ಯೋಗ ಸಂಪರ್ಕ ಕೇಂದ್ರ ಉದ್ಘಾಟನೆ

ಉದ್ಯೋಗದ ಮೂಲಕ ಯುವಜನತೆಯ ರಕ್ಷಣೆಯ ಸೇವೆ ದೇಶ ಸೇವೆಗೆ ಸಮಾನ: ವಸಂತ ಬಂಗೇರ

ಬೆಳ್ತಂಗಡಿ: ರಾಜ್ಯದಲ್ಲೇ ಅತೀ ದೊಡ್ಡ ತಾಲೂಕು ಬೆಳ್ತಂಗಡಿ. ಇಲ್ಲಿ ಸಾಕಷ್ಟು ಯುವಜನತೆ ನಿರುದ್ಯೋಗ ಸಮಸ್ಯೆ ಮತ್ತು ಅವಕಾಶಗಳ ಅಲಭ್ಯತೆ ಸಮಸ್ಯೆ ತೀವ್ರವಾಗಿ ಎದುರಿಸುತ್ತಿದ್ದು, ಈ ತಾಲೂಕಿನಲ್ಲಿ ಉದ್ಯೋಗ ಮೇಳ ಅಯೋಜನೆ ಮಾಡುವ ಮೂಲಕ ಕೆಲಸ ಆಗಬೇಕು. ಸೈನಿಕರು ಯಾವ ರೀತಿ ಗಡಿಯಲ್ಲಿ ದೇಶ ಕಾಯುವ ಕೆಲಸ ಮಾಡುತ್ತಾರೋ ಈ ಸಂಸ್ಥೆ ಕೂಡ ಯುವಜನತೆಗೆ ಉದ್ಯೋಗ ಮತ್ತು ಜೀವನ ಭದ್ರತೆ ಕೊಡಿಸುವ ಮೂಲಕ ಮಾಡುವ ಈ ಕೆಲಸ ದೇಶ ಸೇವೆಗೆ ಸಮಾನವಾದುದು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಅನ್ವೇಷಣೆಯಲ್ಲಿರುವ ಯುವ ಸಮುದಾಯಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ 3 ವರ್ಷಗಳ ಹಿಂದೆ ಸಮಾಜಮುಖಿ ಚಿಂತನೆಗಳೊಂದಿಗೆ ಪ್ರಾರಂಭವಾದ ವಿದ್ಯಾಮಾತಾ ಫೌಂಡೇಶನ್ ಸಂಸ್ಥೆ ಮೇ. 19 ರಂದು ಬೆಳ್ತಂಗಡಿ ಪಿಂಟೋ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಲ್ಲಿ ತಮ್ಮ ಸೇವಾ ವಿಸ್ತರಣೆಯ ಅಂಗವಾಗಿ ನೂತನವಾಗಿ ರೂಪಿಸಿದ ಕಛೇರಿ ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗರಿಸಿದ ಸಂಸ್ಥೆಯ ಸಂಸ್ಥಾಪಕ ಭಾಗ್ಯೇಶ್ ರೈ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆ ಈಗಾಗಲೇ ಪುತ್ತೂರು ತಾಲೂಕಿನಲ್ಲಿ ಕಚೇರಿ ಹೊಂದಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.
ನಮ್ಮ ಸಂಸ್ಥೆಯಿಂದ ಕಳೆದ 2 ವರ್ಷಗಳಲ್ಲಿ 3 ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಿಕೊಟ್ಟು ಅವರ ಪ್ರೀತಿ ಗೌರವಕ್ಕೆ ಪಾತ್ರವಾಗಿದೆ. ನೇರ ಸಂದರ್ಶನದ ಮೂಲಕ 1900 ಅಭ್ಯರ್ಥಿಗಳಿಗೆ ಉದ್ಯೋಗ, ಸಂದರ್ಶನ ಎದುರಿಸುವ ತರಬೇತಿ, ದಿನನಿತ್ಯದ ಉದ್ಯೋಗ ಮಾಹಿತಿ, ಗುಣಮಟ್ಟದ ಉದ್ಯೋಗ ಮೇಳ- ಗ್ರಾಮೀಣ ಉದ್ಯೋಗ ಮೇಳಗಳ ಆಯೋಜನೆ, ಪ್ರತೀ ವಾರ ವಿವಿಧ ಕಂಪನಿಗಳಿಗೆ ನೇರ ಸಂದರ್ಶನ ಒದಗಿಸಿಕೊಟ್ಟು ಗ್ರಾಮೀಣ ಪ್ರದೇಶದಲ್ಲಿ ಸ್ವ ಉದ್ಯೋಗ ಮಾಡುವವರಿಗೆ ಉಚಿತ ತರಬೇತಿಯೊಂದಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿದೆ. ಮುಂದಕ್ಕೆ ಈ ಸಂಸ್ಥೆಯ ಸೇವೆ ಬೆಳ್ತಂಗಡಿ ಅಸುಪಾಸಿನ ಜನತೆಗೆ ಲಭ್ಯವಾಗಲಿದೆ ಎಂದರು.
ನಿತ್ಯ ಉದ್ಯೋಗ ನೊಂದಣಿ:
ನಮ್ಮ ಕಚೇರಿಯಲ್ಲಿ ದಿನ ನಿತ್ಯ ಉದ್ಯೋಗ ನೋಂದಾವಣೆ, ಪ್ರತಿವಾರ ನೇರ ಸಂದರ್ಶನ ಆಯೋಜನೆ, ಮತ್ತು ಆನ್‌ಲೈನ್ ಸಂದರ್ಶನಗಳು ನಡೆಯಲಿದೆ. 5 ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಓದಿರುವ ಎಲ್ಲಾ ಅಭ್ಯರ್ಥಿಗಳಿಗೆ 200ಕ್ಕೂ ವಿವಿಧ ಕ್ಷೇತ್ರದ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡುವ ಬಗ್ಗೆ ನಿರಂತರ ಸಂವಹನವನ್ನು ನೊಂದಾಯಿತ ಅಭ್ಯರ್ಥಿಗಳಲ್ಲಿ ಇಟ್ಟುಕೊಳ್ಳಲಾಗುತ್ತದೆ ಎಂದರು.
ಸಂವಹನ ಕಲೆ, ಭಾಷಾ ಕೌಶಲ್ಯ ತರಬೇತಿ:
ಗ್ರಾಮೀಣ ಪ್ರದೇಶದ ಜನರಿಗೆ ವಿದ್ಯೆ ಇದ್ದರೂ ಕೆಲವೊಮ್ಮೆ ಭಾಷಾ ಕೌಶಲ್ಯ ಮತ್ತು ಸಂವಹನ ಕಲೆ ಇಲ್ಲದೆ ಇನ್‌ಟರ್‌ವ್ಯೂಗಳಲ್ಲಿ ಸೋಲುವ ಸಾಧ್ಯತೆಗಳೇ ಅಧಿಕ. ಆ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಸಂದರ್ಶನ ಕಾರ್ಯಾಗಾರ ನಡೆಸುತ್ತಿದ್ದೇವೆ. ಈಗಾಗಲೇ ಪುತ್ತೂರು ಭಾಗದಲ್ಲಿ ಕಳೆದ ೨ ವರ್ಷಗಳಿಂದ ನಾವು ಈ ಕಾರ್ಯವನ್ನು ಮಾಡುತ್ತಿದ್ದು, ಈ ಸೇವೆ ಇನ್ನು ಮುಂದಕ್ಕೆ ಬೆಳ್ತಂಗಡಿಗೂ ವಿಸ್ತರಣೆಯಾಗುತ್ತಿದೆ ಎಂದರು.
ಸಮಾರಂಭದಲ್ಲಿ ಜಯಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ಆಳ್ವಾ, ನಿವೃತ ಯೋಧ ಗೋಪಾಲಕೃಷ್ಣ ಭಟ್ ಕಾಂಚೋಡು, ನಿವೃತ ಸರಕಾರಿ ನೌಕರರು ಮತ್ತು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬಿ ವಿಠಲ ಶೆಟ್ಟಿ ಲಾಲ ಅತಿಥಿಗಳಾಗಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು. ಸಂಸ್ಥೆಯ ಬೆಳ್ತಂಗಡಿ ಬಂಟ್ವಾಳ ಸಂಚಾಲಕ ಸಂಪತ್ ಶೆಟ್ಟಿ, ಅಕ್ಷತ್ ಶೆಟ್ಟಿ, ಅಪರ್ಣಾ ರೈ, ಹರ್ಷಿತಾ, ತುಳಸಿ, ರೂಪೇಶ್ ರೈ, ಪ್ರಮೋದ್, ಯೋಗೀಶ್ ರೈ, ಚಂದ್ರಶೇಖರ್, ವಿನೋದ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.