HomePage_Banner_
HomePage_Banner_
HomePage_Banner_

ವಾಮದಪದವು: ಬ್ರಹತ್ ರಕ್ತದಾನ ಶಿಬಿರ

ರಕ್ತದಾನದಿಂದ ಆರೋಗ್ಯ ಪೂರ್ಣ ಚಿಂತನೆ ಸಾಧ್ಯ :ಡಾ।ದುರ್ಗಾಪ್ರಸಾದ್ ಎಂ.ಆರ್

ಇಂದಿನ ಆಧುನಿಕ ಜಗತ್ತಿನಲ್ಲಿ ರಕ್ತದ ಅಗತ್ಯತೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಅದು ನವಜಾತ ಶಿಶುವಾಗಿರಬಹುದು, ಮಗುವಿಗೆ ಜನ್ಮ ನೀಡಿದ ತಾಯಿಯಾಗಿರಬಹುದು, ಕುಟುಂಬದ ಜವಾಬ್ದಾರಿಯನ್ನು ಹೊತ್ತ ಪುರುಷನಾಗಿರಬಹುದು . ರಕ್ತದ ಅಗತ್ಯತೆ ಯಾವ ವ್ಯಕ್ತಿಗೂ ಯಾವುದೇ ಸಂದರ್ಭದಲ್ಲಿ ಬಂದೋಗಬಹುದು. ರಕ್ತಕ್ಕೆ ಬದಲಿ ರಕ್ತ ಮಾತ. ರಕ್ತದಾನದಿಂದ ಆರೋಗ್ಯ ಪೂರ್ಣ ಚಿಂತನೆ ಸಾಧ್ಯ. ಸಮಾಜ ಮುಖಿ ಕಾರ್ಯಗಳಿಂದ ರಚನಾತ್ಮಕ ಸಮಾಜ ನಿರ್ಮಾಣ ಸಾಧ್ಯ ಈ ನೆಲೆಯಲ್ಲಿ ವಾಮದಪದವು ಪದವಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋವರ್‍ಸ್ -ರೇಂಜರ್‍ಸ್ ಘಟಕ ಹಾಗೂ ರೆಡ್ ರಿಬ್ಬನ್ ಘಟಕಗಳ ಕಾರ್ಯ ಶ್ಲಾಘಾನೀಯ ಎಂದು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ದುರ್ಗಾಪ್ರಸಾದ್ ಎಂ.ಆರ್ ಹೇಳಿದರು.
ಸ.ಪ.ದ.ಕಾಲೇಜು ವಾಮದಪದವು ಹಾಗೂ ರಕ್ತನಿಧಿ ಕೇಂದ್ರ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರು ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ರಕ್ತನಿಧಿ ಕೇಂದ್ರ, ಲೇಡಿಗೋಶನ್ ಆಸ್ಪತ್ರೆ ಮಂಗಳೂರಿನ ಮುಖ್ಯಸ್ಥರಾದ ಶ್ರೀ ಎಡ್ವರ್ಡ್‌ವಾಸ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ಡಾ.ರವಿ ಎಂ.ಎನ್. ಮತ್ತು ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ ಕಾರ್ಯಕ್ರಮವನ್ನು ಸಂಘಟಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಮೇರಿ ಎಂ.ಜೆ. ರೇಂಜರ್ ಲೀಡರ್ ಪ್ರೊ.ಉಷಾ. ಬಿ. ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು ಸವಿತಾ ಪ್ರಾರ್ಥಿಸಿ, ಪವಿತ್ರ ನಿರೂಪಿಸಿ, ಶ್ವೇತಾ ನಾಯಕ್ ಸ್ವಾಗತಿಸಿ, ಶ್ವೇತಾ ವಂದಿಸಿದರು. ಒಟ್ಟು43 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.