ಮರದಿ ದಿಮ್ಮಿ ಮೈಮೇಲೆ ಉರುಳಿ ವ್ಯಕ್ತಿ ಗಂಭೀರ

ದೇಹದ ಬಹುತೇಕ ಮೂಳೆಮುರಿತ: ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂ. ಅವಶ್ಯ

ಮಡಂತ್ಯಾರು: ಇಲ್ಲಿನ ಯೂಸುಫ್ ಎಂಬವರು ಮೇ.9 ರಂದು ಮರದ ಲೋಡ್ ಕೆಲಸ ಮಾಡುವ ಸಂದರ್ಭ ಕ್ರೇನಿನಿಂದ ಮರವೊಂದು ಅವರ ಮೈಮೇಲೆ ಉರುಳಿಬಿದ್ದು ಗಂಭೀರಗಾಯಗೊಂಡ ಘಟನೆ ನಡೆದಿದೆ.
ಈ ಅವಘಡದಿಂದ ಅವರ ಬೆನ್ನುಮೂಳೆ, ಸೊಂಟದ ಮೂಳೆ, ಎರಡೂ ಕಾಲುಗಳ ಮೂಳೆಗಳು, ಕೈ ಮತ್ತು ಎದೆಯ ಮೂಳೆಗಳು ಹೀಗೆ ಬಹುತೇಕ ಮೂಳೆಗಳು ಮುರಿತಕ್ಕೊಳಗಾಗಿದ್ದು ತೀವ್ರ ಸ್ವರೂಪದ ಗಾಯಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

10 ಲಕ್ಷಕ್ಕೂ ಅಧಿಕ ಮೊತ್ತದ ವಶ್ಯಕತೆ:
ಅವರ ಚಿಕಿತ್ಸೆಗೆ ಸುಮಾರು 10 ಲಕ್ಷಕ್ಕೂ ಅಧಿಕ ಮೊತ್ತ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ 5 ಹೆಣ್ಣು ಮಕ್ಕಳ ಸಂಸಾರ ಇವರದ್ದು. ವಾಸಿಸಲು ಸ್ವಂತ ಮನೆ ಕೂಡ ಇರದ ಇವರ ಮೊದಲ ಮಗಳ ಮದುವೆ ಕೂಡ ನಿಶ್ಚಿತಾರ್ಥವಾಗಿದೆ. ಮನೆಯ ಖರ್ಚಿಗಾಗಿ ದುಡಿಯುವ ಏಕೈಕ ಕೈಯ್ಯಾಗಿದ್ದ ಅವರ ಅಪಘಾತ ಇಡೀ ಕುಟುಂಬಕ್ಕೆ ತೀವ್ರ ಆಘಾತ ತಂದಿದೆ. ಹಣಕಾಸು ಹೊಂದಾಣಿಕೆ ಆಗದ್ದರಿಂದ ಸದ್ಯಕ್ಕೆ ಅವರಿಗೆ ಶಸ್ತ ಚಿಕಿತ್ಸೆ ಕೈಗೊಂಡಿಲ್ಲ.5 ದಿನಗ ವರೆಗೆ ನಿಗಾ ಇಡಲಾಗಿದೆ.

ದಾನಿಗಳಿಂದ ಸಹಾಯ ಯಾಚನೆ:
ಅವರ ಚಿಕಿತ್ಸೆಗಾಗಿ ಸಾರ್ವಜನಿಕರಲ್ಲಿ ದೇಣಿಗೆ ಯಾಚಿಸಲಾಗಿದ್ದು ಸಹಾಯ ಮಾಡಲು ಇಚ್ಚಿಸುವವರು: Name : BEEBI, Bank: State Bank Of India, Branch: Madanthayr , IFSC  CODE: SBIN0015151, Account number :20243116464, ದೂರವಾಣಿ ಸಂಖ್ಯೆ  : 9632366497, 9972725578  ಸಂಪರ್ಕಿಸಬಹುದು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.