HomePage_Banner_
HomePage_Banner_
HomePage_Banner_

ಒಮಾನ್ ಮಸ್ಕತ್‌ನಲ್ಲಿ ರಸ್ತೆ ಅಪಘಾತ: ಕುವೆಟ್ಟು ಗ್ರಾಮದ ಯುವಕ ನೂರ್ ಮುಹಮ್ಮದ್ ಯಾನೆ ಶೇಕ್ ಶಬನೂರ್ ವಿಧಿವಶ

* ಮಸ್ಕತ್‌ನಲ್ಲಿ ರಸ್ತೆ ಅಪಘಾತ
* ಮೃತ ಒಟ್ಟು ನಾಲ್ವರು ವಿದೇಶೀಯರಲ್ಲಿ ಶಬ್‌ನೂರ್ ಒಬ್ಬರು
* ವಾಟರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ
* ಊರಿನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದುದನ್ನು ಬಿಟ್ಟು ವಿದೇಶಕ್ಕೆ ಹೋಗಿದ್ದ ಶಬ್‌ನೂರ್

ಗುರುವಾಯನಕೆರೆ: ಒಮಾನ್ ದೇಶದ ಮಸ್ಕತ್‌ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಸುನ್ನತ್‌ಕೆರೆ ನಿವಾಸಿ ನೂರ್‌ಮುಹಮ್ಮದ್ ಯಾನೆ ಶೇಕ್ ಶಬ್‌ನೂರ್ ಅವರು ಧಾರುಣವಾಗಿ ಮೃತಪಟ್ಟಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಶೋಶಿಯಲ್ ಫೋರಂ ಸಂಘಟನೆ ಸಹಾಯದಿಂದ ಮೇ. 15 ರಂದು ಗುರುವಾಯನಕೆರೆಗೆ ತರಲಾಗಿದೆ.
ಊರಿನಿಂದ ಬಂದ ಕರೆಯೊಂದು ಮಸ್ಕತ್‌ನ “ಮುಸನ್ನ” ಎಂಬಲ್ಲಿ ಅಪಘಾತ ನಡೆದು ಊರಿನ ಯುವಕರೊಬ್ಬರು ಮರಣ ಹೊಂದಿದ್ದಾರೆಂಬ ಮಾಹಿತಿಗೆ ತಕ್ಷಣ ಸ್ಪಂದಿಸಿ ಕಾರ್ಯಪ್ರವೃತ್ತವಾದ ಸೋಶಿಯಲ್ ಫೋರಂ ಸಂಘಟನೆ, ನೂರ್‌ಮುಹಮ್ಮದ್ ಕೆಲಸ ಮಾಡುತ್ತಿದ್ದ ಕಂಪೆನಿಯನ್ನು ಸಂಪರ್ಕಿಸಿ ಅಗತ್ಯ ವಿದೇಶಾಂಗ ಕಾನೂನು ಕ್ರಮಗಳನ್ನು ಪೂರೈಸಿ ಮೃತದೇಹದ ಸಾಗಾಟ ವ್ಯವಸ್ಥೆಮಾಡಿದರು.

ಕ್ಯಾಲಿಕಟ್ ವಿಮಾನ ನಿಲ್ದಾಣ ಮೂಲಕ ಮೃತದೇಹ ಊರಿಗೆ:
ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ನೂರ್‌ಮುಹಮ್ಮದ್ ಅವರ ಮೃತದೇಹವನ್ನು ಊರಿಗೆ ತರಲಾಯಿತು, ಅಲ್ಲಿಂದ ಪಿಲಿಚಂಡಿಕಲ್ಲು ಸನ್ನತ್‌ಕೆರೆಗೆ ಅಪರಾಹ್ನ ಮೃತದೇಹ ಮನೆ ತಲುಪಿ, ಇಲ್ಲಿನ ಮಸೀದಿ ದಫನಭೂಮಿಯಲ್ಲಿ ಸಂಸ್ಕಾರ ನಡೆಸಲಾಯಿತು.
ಈ ಕಾರ್ಯಾಚರಣೆಗೆ ನೇತೃತ್ವ ನೀಡಿದ ಸೋಷಿಯಲ್ ಫೋರಂ ಓಮಾನ್ ತಂಡದ ಸಲಾಂ ಬೈಲೂರ್ ಮತ್ತು ಮುಹ್ಯುದ್ದೀನ್ ಎಸ್.ಕೆ ಬೆಳ್ತಂಗಡಿಯವರು ಪ್ರತಿಕ್ರಿಯಿಸಿ, ಉಪಾವಾಸ ಸಂದರ್ಭವಾಗಿರುವುದರಿಂದ ಮತ್ತು ಒಮಾನ್ ದೇಶದ ಕಚೇರಿಗಳ ಸಮಯದ ವ್ಯತ್ಯಾಸವಿರುವುದರಿಂದ ತೊಡಕುಂಟಾಯಿತು ಎಂದು ತಿಳಿಸಿದ್ದಾರೆ.

ಪಣಕಜೆ ಮಸ್ಜಿದ್‌ನಲ್ಲಿ ಶವ ಸ್ನಾನ:
ಮೃತದೇಹ ಊರಿಗೆ ತಲುಪುವ ಮಧ್ಯೆ ಪಣಕಜೆ ಮಸ್ಜಿದ್‌ನಲ್ಲಿ ಅಂತಿಮ ಶವಸ್ನಾನ ಮತ್ತು ಧಾರ್ಮಿಕ ವಿಧಿ ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಮನಗೆ ತಂದು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮಕ್ಕೆ ವೀಕ್ಷಣೆಗೆ ಅವಕಾಶ ನೀಡಲಾಯಿತು. ಆ ಬಳಿಕ ಸುನ್ನತ್‌ಕೆರೆ ಮಸ್ಜಿದ್‌ನಲ್ಲಿ ಅಂತಿಮ ನಮಾಝ್ ನಿರ್ವಹಿಸಿ ಗುರುವಾಯನಕೆರೆ ಮಸ್ಜಿದ್ ದಫನಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಮುಂದಿನ ತಿಂಗಳು ಊರಿಗೆ ಬರುವವರಿದ್ದರು:
ಮೃತ ನೂರ್ ಮುಹಮ್ಮದ್ ಅವರು ಎರಡು ವರ್ಷಗಳಿಂದ ವಿದೇಶದಲ್ಲಿದ್ದವರು ಮುಂದಿನ ತಿಂಗಳು ನಡೆಯಲಿದ್ದ ಚಿಕ್ಕಮ್ಮನ ಮಗನ ಮದುವೆಗೆ ಊರಿಗೆ ವಾಪಾಸಾಗುವವರಿದ್ದರು. ಈ ನಡುವೆ ರಂಝಾನ್ ತಿಂಗಳಲ್ಲಿ ಕರ್ತವ್ಯದಲ್ಲಿದ್ದ ವೇಳೆ ನಡೆದ ಅಪಘಾತದಲ್ಲಿ ಅವರು ಅಸುನೀಗಿದ್ದು ಊರಿಗೆ ಅವರ ಮೃತದೇಹ ತರುವಂತಾದುದು ಮಾತ್ರ ಖೇದಕರವಾಗಿದೆ.
ಮೃತರು ತಂದೆ ಚಾಬಾ ಸಾಹೇಬ್, ತಾಯಿ ಕಮರು, ಸಹೋದರ ಶಬೀರ್, ಅಕ್ಕ ಶಬೀನಾ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.