HomePage_Banner_
HomePage_Banner_
HomePage_Banner_

ವೇಣೂರು: ಕೈಕೊಟ್ಟ ಬಿಎಸ್ಸೆನ್ನೆಲ್ ನೆಟ್‌ವರ್ಕ್; 2 ದಿನ ಗ್ರಾಹಕರ ಪರದಾಟ

ಕಡಿತಗೊಂಡಿರುವ ಒಎಫ್‌ಸಿ ಕೇಬಲ್‌ಗಳನ್ನು ದುರಸ್ತಿ ಮಾಡುತ್ತಿರುವ ಸಿಬ್ಬಂದಿ

ವೇಣೂರು: ವಿದ್ಯುತ್ ಕಂಬದ ಗುಂಡಿ ತೆಗೆಯುವ ವೇಳೆ ಅಂಡಿಂಜೆ ಟವರ್‌ನಿಂದ ವೇಣೂರು ದೂರವಾಣಿ ವಿನಿಮಯ ಕೇಂದ್ರಕ್ಕೆ ಸಂಪರ್ಕಿಸುವ ಒಎಫ್‌ಸಿ ಕೇಬಲ್ (ಆಪ್ಟಿಕಲ್ ಫೈಬರ್ ಕೇಬಲ್) ತುಂಡಾಗಿ ಸ್ಥಿರ ದೂರವಾಣಿ ಹಾಗೂ ಸಾವಿರಾರು ಮಂದಿ ಸಂಚಾರಿ ದೂರವಾಣಿ ಗ್ರಾಹಕರು 2 ದಿನ ಪರದಾಡುವಂತಾಯಿತು.

ವೇಣೂರು ಮೆಸ್ಕಾಂ ಉಪಕೇಂದ್ರದಿಂದ ವಿವಿಧ ಕಡೆಗಳಿಗೆ ಲಿಂಕ್‌ಲೈನ್ ಹಾಗೂ ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತಿದೆ. ವೇಣೂರಿನಿಂದ ಅಂಡಿಂಜೆ ಗ್ರಾಮಗಳಿಗೆ ಲಿಂಕ್‌ಲೈನ್ ಹಾಗೂ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಹೊಸ ತಂತಿಗಳನ್ನು ಜೋಡಿಸಲಾಗುತ್ತಿದ್ದು, ವೇಣೂರು-ಅಂಡಿಂಜೆ ಬದಿಯಲ್ಲಿ ಬೃಹದಾಕಾರದ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ವೇಣೂರು ಶ್ರೀರಾಮ ನಗರದ ಬಳಿ ಯಂತ್ರದ ಮೂಲಕ ಗುಂಡಿ ತೆಗೆಯುವ ವೇಳೆ ಅಂಡಿಂಜೆ ಟವರ್‌ನಿಂದ ವೇಣೂರು ದೂರವಾಣಿ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸುವ ಪ್ರಮುಖ ಸಂಪರ್ಕ ಕೇಬಲ್ (ಒಎಫ್‌ಸಿ ಕೇಬಲ್) ತುಂಡಾಗಿದ್ದು, ಸಮಸ್ಯೆಗೆ ಕಾರಣವಾಯಿತು.
ಸಂಪರ್ಕ ಇಲ್ಲದೆ ತೊಂದರೆ
1 ತ್ರೀಜಿ ಟವರ್, ಎರಡು 2ಜಿ ಟವರ್, 90ಕ್ಕೂ ಅಧಿಕ ಬ್ರಾಂಡ್‌ಬ್ಯಾಂಡ್‌ಗಳು, 300ಕ್ಕೂ ಅಧಿಕ ಸ್ಥಿರ ದೂರವಾಣಿ ಹಾಗೂ ಸಾವಿರಾರು ಮಂದಿ ಸಂಚಾರಿ ದೂರವಾಣಿ ಗ್ರಾಹಕರು, ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳು, ಎಟಿಎಂ ಸೇವೆಗಳು, ಸರಕಾರಿ ಆಸ್ಪತ್ರೆ, ಅಂಚೆಕಚೇರಿ, ಪೊಲೀಸ್ ಠಾಣೆ, ರೈತ ಸಂಪರ್ಕಕೇಂದ್ರ ಸೇರಿದಂತೆ ಸರಕಾರಿ ಸೇವಾ ಕಚೇರಿಗಳು ಖಾಸಗಿ ಸೇವಾ ಸಂಸ್ಥೆಗಳು ಸಂಪರ್ಕ ಇಲ್ಲದೆ ತೊಂದರೆ ಅನುಭವಿಸುಂತಾಯಿತು. ವೇಣೂರು ನಗರ ಹಾಗೂ ಅಂಡಿಂಜೆ ಭಾಗಗಳ ಎಲ್ಲಾ ಬ್ರಾಡ್‌ಬ್ಯಾಂಡ್, ಸ್ಥಿರ ಹಾಗೂ ಸಂಚಾರಿ ದೂರವಾಣಿ ಸಂಪರ್ಕಗಳು ಸ್ಥಬ್ಧಗೊಂಡಿದ್ದವು.
ನೆಟ್‌ವರ್ಕ್ ಇಲ್ಲ:
ನಾರಾವಿ, ಕೊಕ್ರಾಡಿ, ಹೊಸಂಗಡಿ, ಆರಂಬೋಡಿ, ಮೂಡುಕೋಡಿ, ಕುಕ್ಕೇಡಿ ಹಾಗೂ ಪಡಂಗಡಿ ಗ್ರಾಮಗಳಲ್ಲೂ ಸರಿಯಾಗಿ ನೆಟ್‌ವರ್ಕ್ ಲಭಿಸುತ್ತಿಲ್ಲ. ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಕೆಲವೇ ಹೊತ್ತಿನಲ್ಲಿ ಸಂಪರ್ಕ ಕಡಿತಗೊಳುತ್ತದೆ. ಕಳೆದು ಸುಮಾರು ೨೦ ದಿನಗಳಿಂದ ಇಂತಹ ಸಮಸ್ಯೆ ಎದುರಾಗಿದ್ದು, ಬಿಸ್ಸೆನ್ನೆಲ್ ಸರಕಾರಿ ಸೇವೆಯನ್ನು ಅಭಿವೃದ್ಧಿಗೊಳಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.
ದುರಸ್ತಿ ಕಾರ್ಯ:
ಮಂಗಳೂರಿನಿಂದ ಹೆಚ್ಚುವರಿಯಾಗಿ ದೂರವಾಣಿ ಸಂಪರ್ಕ ಇಲಾಖೆಯ ಸಿಬ್ಬಂದಿಗಳನ್ನು ತರಿಸಲಾಗಿದ್ದು, ಮೇ ೧೧ರಂದು ಬೆಳಿಗ್ಗೆಯಿಂದ ದುರಸ್ತಿ ಕಾರ್ಯ ಸಂಜೆ ವೇಳೆ ಸಂಪರ್ಕ ದೊರೆತ್ತಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.