ಬಂದಾರು ದಡತ್ತಮಲೆ ಕಾಡಿನಲ್ಲಿ ವಾರಗಳಿಂದ ನಿರಂತರ ಕಾಡ್ಗಿಚ್ಚು

ಬಂದಾರು: ಇಲ್ಲಿಯ ದೊಡ್ಡದಾದ ದಡತ್ತಮಲೆ ಕಾಡಿನ ಸುಮಾರು 60 ಎಕರೆಗೂ ಹೆಚ್ಚು ಪ್ರದೇಶದಲ್ಲಿ 7-8 ದಿನಗಳಿಂದ ಅರಣ್ಯ ನೆಡುತೋಪುನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಭಾರೀ ಬೆಲೆ ಬಾಳುವ ಬೃಹತ್ ಗಾತ್ರದ ಮರ, ಬಿದಿರು, ಬೆತ್ತ, ಪುನರ್ಪುಲಿ, ಮಾವು, ಹೆಬ್ಬಲಸು ಮುಂತಾದ ಮರ ಗಿಡಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸ್ಥಳೀಯರು ಹಲವಾರು ಬಾರಿ ಮಾಹಿತಿ ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕುಕ್ಕಿಲ, ಮೈಪಾಲ, ಕಿಲಾರು, ಬಲಿಪೆ, ಸಮೀಪದ ಕೃಷಿಕರ ಅಡಿಕೆ, ತೆಂಗು, ರಬ್ಬರ್, ತೋಟಗಳಿಗೆ ಬೆಂಕಿ ಆವರಿಸುವ ಭಯದಿಂದ ಸ್ಥಳೀಯ ಕೃಷಿಕರು ಕಂಗೆಟ್ಟುಹೋಗಿದ್ದಾರೆ. ಕಾಡಿನಲ್ಲಿ ಸುಟ್ಟು ಕರಕಲಾಗಿರುವ ಮರ ಬಳ್ಳಿಗಳು ಮುರಿದು ಬೀಳುತ್ತ್ತಿವೆ.ಪೇರ್ಲ ಬೈಪಾಡಿಯ ಮೂಲಕ ಮೈಪಾಲ ನದಿಗೆ ಸೇರುವ ಮಣ್ಣಿನ ರಸ್ತೆಯ ವ್ಯವಸ್ಥೆಯು ಚೆನ್ನಾಗಿದ್ದು ಮರಳುಗಾರಿಕೆ ಹಾಗೂ ಮರದ ಕಳ್ಳತನ ರಾತ್ರಿಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದೂ ಗ್ರಾಮಸ್ಥರು ದೂರುತ್ತಿದ್ದಾರೆ.
ಅಗ್ನಿಶಾಮಕಕ್ಕೆ ಮಾಹಿತಿ ನೀಡಿಲ್ಲವಂತೆ:
ಊರವರು ಇಲ್ಲಿ ಒಂದು ವಾರದಿಂದ ಬೆಂಕಿ ಉರಿಯುತ್ತಿದೆ ಎಂದು ಹೇಳುತ್ತಿದ್ದರೂ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿಲ್ಲವಂತೆ. ಕೇಳಿದರೆ ಇಲಾಖೆಯೇ ಕ್ರಮಕೈಗೊಳ್ಳುವುದಾಗಿ ಹೇಳಿದ್ದರಿಂದ ನಾವು ಈ ಬಗ್ಗೆ ಆಲೋಚಿಸಿಲ್ಲ ಎನ್ನುತ್ತಾರೆ ಊರವರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.