HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬಾಲಕಿಯ ಅನಾರೋಗ್ಯ ಚಿಕಿತ್ಸೆಗಾಗಿ ಬಸ್ಟ್ಯಾಂಡ್‍ ನಲ್ಲಿ ನೀರು ಮಾರಾಟ ಮಾಡಿದ ರಾಜಕೇಸರಿ ಕಾರ್ಯಕರ್ತರು

ಮುಂಡಾಜೆಯ ಬಡ ಕುಟುಂಬದ ಬಾಲಕಿ ಅನಾರೋಗ್ಯ ಪೀಡಿತೆಯಾಗಿರುವ ಶ್ರುತಿ ಶೆಟ್ಟಿ ಅವರ ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ರಾಜಕೇಸರಿ ಸಂಘಟನೆಯ ಐವತ್ತಕ್ಕೂ ಅಧಿಕ ಕಾರ್ಯಕರ್ತರು ಬೆಳ್ತಂಗಡಿ ಬಸ್ಟ್ಯಾಂಡ್‍ ನಲ್ಲಿ ಐದು ರೂಪಾಯಿ ಬೆಲೆಯ ಕುಡಿಯುವ ನೀರಿನ ಬಾಟಲಿಗಳನ್ನು ಮಾರಾಟ ಮಾಡಿ ದೇಣಿಗೆ ಸಂಗ್ರಹಿಸಿದ ವಿಶಿಷ್ಟ ಕಾರ್ಯಕ್ರಮ ಮೇ.12 ರಂದು ನಡೆಯಿತು. ಸಂಘಟನೆ ಸ್ಥಾಪಕಾಧ್ಯಕ್ಷ ದೀಪಕ್ ಜಿ ಅವರ ನೇತೃತ್ವದ ತಂಡ ಈ ಕಾರ್ಯ‍ವನ್ನು ಶಿಸ್ತುಬದ್ಧವಾಗಿ ಮಾಡಿತು.


ಖಾಸಗಿ ವಾಹನ ಮತ್ತು ಸರಕಾರಿ ಬಸ್ಸುಗಳ ಪ್ರಯಾಣಿಕರಿಗೆ ತಮ್ಮ ಬನಿಯನ್ ಗೆ ಹಾಕಿರುವ ಸ್ಟಿಕ್ಕರ್ ಮೂಲಕ ಅನಾರೋಗ್ಯ ಪೀಡಿತ ಬಾಲಕಿಯ ದಯನೀಯ ಸ್ಥಿತಿಯನ್ನು ತಿಳಿಯುವಂತೆ ಮಾಡಿ 5 ರೂ ಬೆಲೆಯ ನೀರಿನ ಬಾಟಲ್ ಅನ್ನು 10 ರೂ. ಗೆ ಮಾರಾಟ ಮಾಡಿದರು.

ವಿಚಾರ ಅರಿತ ಕೆಲ ನಾಗರಿಕರು 10 ರೂ ಮಾತ್ರವಲ್ಲದೆ ಹೆಚ್ಚುವರಿ ಹಣ ತೆತ್ತು ನೀರು ಖರೀದಿ ಮಾಡುವ ಮೂಲಕ ಬಾಲಕಿಗೆ ನೆರವಾದರು.

ತಂಡದಲ್ಲಿ ಅರ್ಪಣ್ ಶೆಟ್ಟಿ, ಲೋಕೇಶ್ ಕುಮಾರ್ ಕುತ್ಲೂರು, ಅನಿಲ್ ಕುಮಾರ್, ಲೋಕೇಶ ಸಬರಬೈಲು, ಸಂತೋಷ್ ನೆರಿಯ, ಸಂತೊಷ್ ಬಡೆಕೊಟ್ಟು, ದೀಕ್ಷಿತ್ ಪಣಕಜೆ, ಸದಾನಂದ ಪಣಕಜೆ, ವಿಕೇಶ್ ಪಣಕಜೆ, ದೀಪಕ್ ಪಣಕಜೆ, ಸಂತೋಷ್ ಪಣಕಜೆ, ಅನಂತು ಆಚಾರ್ಯ ಪಣಕಜೆ, ಶರತ್ ಪದ್ಮುಂಜ, ರಕ್ಷಿತ್ ಉಜಿರೆ, ಸದಾಶಿವ ಉಜಿರೆ, ಕಾರ್ತಿಕ್ ಉಜಿರೆ, ಪ್ರಕಾಶ್ ಉಜಿರೆ, ಉಮೇಶ್ ಉಜಿರೆ, ಪ್ರವೀಣ್ ಉಜಿರೆ ಮೊದಲಾದವರು ಭಾಗಿಯಾದರು.

ಬಾಲಕಿಗಾಗಿ 30400 ರೂ. ದೇಣಿಗೆ ಸಂಗ್ರಹ
ಕಾರ್ಯಕರ್ತರ ಈ ವಿನೂತನ ಪ್ರಯೋಗದಲ್ಲಿ ಒಟ್ಟು 45 ಸಾವಿರ ರೂ. ದೇಣಿಗೆ ಸಂಗ್ರಹವಾಗಿದೆ. ಇದರಲ್ಲಿ ಸಂಘಟನೆಗೆ ನೀರಿನ ಮೊತ್ತ ಮತ್ತು ಇತರ ಖರ್ಚು ಎಂಬಂತೆ 14600 ರೂ. ಖರ್ಚಾಗಿದೆ. ಉಳಿಕೆ 30,400 ರೂ. ಗಳನ್ನು ಪೂರ್ತಿ ಬಾಲಕಿಗೆ ನೆರವಾಗಿ ನೀಡಲು ತೀರ್ಮಾನಿಸಲಾಗಿದೆ.

ಜನ ನಮ್ಮ ಆಲೋಚನೆಗೆ ಜನ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದಾರೆ. ಕೆಲವರು ಪ್ರಶ್ನಿಸಿದ್ದೂ ಇದೆ. ದೂರ ದೂರ ಹೋಗುವ ಸರಕಾರಿ ಬಸ್ಸಿನವರೂ ಕೂಡ ಸಹಕಾರ ನೀಡಿದ್ದು ಬಸ್ಸಿನ ಒಳಗೆ ಹೋಗಿ ನೀರು ಕೊಡಲು ಸಹಕರಿಸಿದ್ದಾರೆ. ಆದರೆ ಪುತ್ತೂರು ಪ್ರಯಾಣಿಸುವ ಬಸ್ಸಿನ ಚಾಲಕರೊಬ್ಬರು ಅಸಹಕಾರ ವ್ಯಕ್ತಪಡಿಸಿ ನಮ್ಮನ್ನೇ ತರಾಟೆಗೆ ತೆಗೆದುಕೊಂಡದ್ದೂ ಮಾತ್ರವಲ್ಲದೆ ನಮ್ಮಕಾರ್ಯಕರ್ತರನ್ನು ಮೂರು ಮಾರ್ಗದವರೆಗೂ ಕೊಂಡೋಗಿ ಅಲ್ಲಿ ಇಳಿಸಿ ಹೋದ ಕಹಿ ಘಟನೆಯೂ ನಡೆದಿದೆ. ಏನೇ ಇರಲಿ ನಮ್ಮ ಉದ್ದೇಶ ಈಡೇರಿದ್ದು ಸಿಕ್ಕಿದ ಮೊತ್ತವನ್ನು ಬಾಲಕಿ ಮನೆಯವರಿಗೆ ಹಸ್ತಾಂತರಿಸಿದ್ದೇವೆ ಎಂಬ ಖುಷಿ ಇದೆ.

ದೀಪಕ್ ಜಿ. ರಾಜಕೇಸರಿ ಸಂಘಟನೆ ಸಂಸ್ಥಾಪಕರು

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.