ಬೊಳ್ಳುಕಲ್ಲು: ಉಚಿತ ನೇತ್ರ ತಪಾಸಣಾ ಚಿಕಿತ್ಸಾ ಶಿಬಿರ

ಬೊಳ್ಳುಕಲ್ಲು: ರಾಜಕೇಸರಿ ಘಟಕ ಪ್ರಸಾದ್ ನೇತ್ರಾಲಯ ಇವರ ವತಿಯಿಂಉಚಿತ ನೇತ್ರಾ ಚಿಕಿತ್ಸಾ ಶಿಬಿರವು ಮೇ.5 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರಂಜದಲ್ಲಿ ನಡೆಯಿತು. ಸಭಾ ಅಧ್ಯಕ್ಷತೆಯನ್ನು ಬೊಳ್ಳುಕಲ್ಲು ರಾಜಕೇಸರಿ ಸಂಘದ ಅಧ್ಯಕ್ಷ ಸಚಿತ್.ಕೆ ವಹಿಸಿದ್ದರು. ಉಪನ್ಯಾಸಕ ಕೇಶವ ಬಂಗೇರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನೇತ್ರ ತಜ್ಞೆ ಡಾ| ರೇಷ್ಮ ಉಡುಪಿ, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ದ.ಕ ಜಿಲ್ಲಾ ರಾಜಕೇಸರಿ ಸಂಸ್ಥಾಪಕ ದೀಪಕ್.ಜಿ, ಕಳಿಯ ಪ. ಅಧ್ಯಕ್ಷ ಶರತ್ ಕುಮಾರ್, ಕಳಿಯ ಜನ ಜಾಗೃತಿ ವೇದಿಕೆ ಗ್ರಾಮ ಸಮಿತಿ ಅಧ್ಯಕ್ಷ ಪ್ರಕಾಶ್ ಮೇರ್ಲ, ಕೊರಂಜ ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ಸತೀಶ್ ಶೆಟ್ಟಿ, ಬೆಳ್ತಂಗಡಿ ರಾಜಕೇಸರಿ ಅಧ್ಯಕ್ಷ ಲೋಕೇಶ್ ಕುತ್ಲೂರು, ರಾಜ ಕೇಸರಿ ಮಹಿಳಾ ಅಧ್ಯಕ್ಷೆ ರತ್ನಾ ಗಣೇಶ್ ಮರಿಪ್ಪಾದೆ, ಗೇರುಕಟ್ಟೆ ಜ್ಯೋತಿ ಶಾಮಿಯಾನದ ಮಾಲಕ ವಿ.ಹರೀಶ್ ಕುಮಾರ್, ಡಾ| ಮಧುಕರ್ ಹಾಗೂ ಸಿಬ್ಬಂದಿಗಳು, ಬೊಳ್ಳುಕಲ್ಲು ರಾಜಕೇಸರಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸುಮಾರು 65 ಕ್ಕೂ ಹೆಚ್ಚು ಫಲಾನುಭವಿಗಳು ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು.

ಶಾಲಿನಿ ಗೇರುಕಟ್ಟೆ ಪ್ರಾರ್ಥಿಸಿ, ವಿನೋದ್ ಗೌಡ ಹೀರ್ಯ ಸ್ವಾಗತಿಸಿ, ದಿನೇಶ್ ಗೌಡ ಕಲ್ಕುರ್ಣಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.