HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೊತ್ಸವ: ಧಾರ್ಮಿಕ ಸಭೆ

ಲಾಯಿಲ: ಇಲ್ಲಿಯ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ನಿಮಿತ್ತ ಮೇ.9 ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಧರ್ಮ-ಅಧರ್ಮದ ಕುರಿತು, ಪಾಪ-ಪುಣ್ಯದ ಮೇಲೆ, ದೈವದೇವರ ಮೇಲೆ ನಂಬಿಕೆ ಇಲ್ಲದುದರಿಂದ ಸಮಾಜ ಸ್ಥಿರವಾಗಿರಲು ಸಾಧ್ಯವಿಲ್ಲ. ಆದುದರಿಂದ ಅತೀಂದ್ರಿಯಗಳ ಮೇಲೆ ನಂಬಿಕೆ ಇಟ್ಟು ಸಮಾಜ ಉದ್ಧಾರಕರಾಗಿ ಬಾಳಬೇಕು ಎಂದು ಅವರು ನುಡಿದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕರಾದ ಹರೀಶ್ ಪೂಂಜ, ಆಡಳಿತ ಮೊಕ್ತೇಸರ ಎನ್. ಧನಂಜಯ ಅಜ್ರಿ ನಡಗುತ್ತು, ಪ್ರಧಾನ ಕಾರ್ಯದರ್ಶಿ ಬಿ.ಕೆ ಧನಂಜಯ ರಾವ್, ಕಾರ್ಯಾರ್ಧಕ್ಷ ಬಿ. ವಿಠಲ ಶೆಟ್ಟಿ ಲಾಯಿಲ, ಪ್ರಧಾನ ಕಾರ್ಯದರ್ಶಿ ಗಿರೀಶ್ ಡೋಂಗ್ರೆ, ವೀಣಾ ರಾವ್, ಗಣೇಶ್ ಐತಾಳ ದಂಪತಿ, ಬೈಲುವಾರು ಸಮಿತಿ ಮಹಿಳಾ ಸಚಾಲಕರು, ಸಹ ಸಂಚಾಲಕರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.