HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೊಕ್ಕಡ: ಕಾರುಗಳ ಸರಣಿ ಅಪಘಾತ, ಹಲವು ಮಂದಿ ಗಂಭೀರ

ಕೊಕ್ಕಡದಿಂದ ಧರ್ಮಸ್ಥಳಕ್ಕೆ ಹೋಗುವ ಹೆದ್ದಾರಿಯಲ್ಲಿ ಕಾರುಗಳೆರಡು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಕಾರುಗಳಲ್ಲಿದ್ದ ಹಲವು ಮಂದಿ ಗಾಯಗೊಂಡ ಘಟನೆ ಮತ್ತು ಇದೇ ಅಪಘಾತ ನಡೆದ ಸ್ಥಳಕ್ಕೆ ಗಾಯಾಳುಗಳನ್ನ ಕೊಂಡೊಯ್ಯಲೆಂದು ಬಂದಿದ್ದ ಆಂಬುಲೆನ್ಸ್ ವಾಹನವೊಂದು ಸೌತಡ್ಕ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾದ ಸರಣಿ ಅಫಘಾತಗಳು ಇಂದು(ಮೇ.6) ಬೆಳಗ್ಗೆ ಹತ್ತು ಗಂಟೆಯ ವೇಳೆ ನಡೆದಿದೆ.

ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸ್ವಿಪ್ಟ್ ಡಿಜೈರ್ ಕಾರು ಕಾಪಿನಬಾಗಿಲು ಸಮೀಪಿಸುತ್ತಿದ್ದಂತೆ ಆಲಂಕಾರಿನಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಸೆಲಾರಿಯೋ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಸೆಲಾರಿಯೋ ಕಾರಿನಲ್ಲಿದ್ದ ಯಮುನಾ (40), ಮುತ್ತಪ್ಪ (45), ಮೋಹಿನಿ (42), ಮೋಕ್ಷಿ (17), ಧನ್ಯ (16) ಎಂಬವರು ಗಾಯಗೊಂಡಿದ್ದಾರೆ. ಇವರ ಪೈಕಿ ಧನ್ಯ ಎಂಬಾಕೆಗೆ ತೀವ್ರ ಗಾಯಗಳಾಗಿದ್ದು ಉಳಿದ ನಾಲ್ಕು ಮಂದಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ಮೂಲದ ಸ್ವಿಫ್ಟ್ ಡಿಜೈರ್ ಕಾರು ಯಾರಿಗೆ ಸೇರಿದ್ದೆಂಬ ಮಾಹಿತಿ ಸಿಕ್ಕಿರುವುದಿಲ್ಲ. ಈ ಕಾರಿನಲ್ಲೂ ಇದ್ದ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಬುಲೆನ್ಸ್ ಕಣಿಗೆ: ಈ ಕಾರು ಅಫಘಾತ ನಡೆಯುತ್ತಲೇ ಗಾಯಾಳುಗಳನ್ನ ಕೊಂಡೊಯ್ಯಲೆಂದು ಧಾವಿಸಿ ಹಲವು ಆಂಬುಲೆನ್ಸ್ ಗಳು ಬಂದು ಗಾಯಾಳುಗಳನ್ನ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ಸಂದರ್ಭ ನೆಲ್ಯಾಡಿ ಮೂಲದ ಇನ್ನೊಂದು ಆಂಬುಲೆನ್ಸ್ ಕೂಡಾ ಘಟನಾ ಸ್ಥಳಕ್ಕೆ ಧಾವಿಸಿದೆ. ಈ ಆಂಬುಲೆನ್ಸ್ ತಲುಪುತ್ತಲೇ ಗಾಯಾಳುಗಳು ಎಲ್ಲ ಹೋಗಿದ್ದರಿಂದ ಮರಳಿ ಅದೇ ವೇಗದಲ್ಲಿ ಹಿಂತಿರುಗುತ್ತಿದ್ದ ಸಂದರ್ಭ ಸೌತಡ್ಕ ದೇವಳದ ದ್ವಾರದ ಸಮೀಪಿಸುತ್ತಿದ್ದಂತೆ ಎದುರು ಗಡೆಯಿಂದ ವಾಹನಗಳು ಬರುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಈ ಆಂಬುಲೆನ್ಸ್ ವಿರುದ್ಧ ದಿಕ್ಕಿನ ಚರಂಡಿಗೆ ಪಲ್ಟಿಯಾಗಿದೆ.

ಈ ಸಂದರ್ಭ ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆಯುವ ಸಂದರ್ಭವೂ ಎದುರಾಗಿದ್ದು, ಸ್ಕೂಟರ್ ಸವಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲ್ಯಾಡಿ ಹೊರಠಾಣಾ ಪೊಲೀಸರು ಮತ್ತು ಹೈವೇ ಪೇಟರೋಲ್ ಸಿಬ್ಬಂದಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ ಸಂಚಾರ ನಿಯಂತ್ರಣ ನಡೆಸಿದರು. ಸಂಚಾರಿ ಪೊಲೀಸರು ಪ್ರಕರಣದ ಕುರಿತು ಕೇಸು ದಾಖಲಿಸಿಕೊಂಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.