ಪಿಲ್ಯ: ಪೈಪ್ ಒಡೆದು ಮನೆಯ ಎದುರೇ ಕೊಳಚೆ ನೀರು ಶೇಖರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರ್ಜಿ ನೀಡಿದರೂ ಕ್ರಮ ವಹಿಸದ  ಅಳದಂಗಡಿ ಪಂಚಾಯತ್

ಅಳದಂಗಡಿ: ಇಲ್ಲಿನ ಪಿಲ್ಯ ಎಂಬಲ್ಲಿ ರಸ್ತೆ ಬದಿ ವಾಸದ ಮನೆ ಎದುರೇ ಕುಡಿಯುವ ನೀರಿನ ಪೈಪ್ ಒಡೆದು ನೀರು ಚರಂಡಿಯಲ್ಲಿ ಶೇಖರಣೆಯಾಗುತ್ತಿದ್ದು, ಇದು ಕಲುಷಿತಗೊಂಡು ತೀವ್ರ ತೊಂದರೆ ಎದುರಾಗಿದೆ ಎಂದು ಇಲ್ಲಿನ ನಿವಾಸಿ ಅಬ್ದುಲ್ ಖಾದರ್ ಅವರು ದೂರಿದ್ದಾರೆ.

ಈ ಬಗ್ಗೆ ಅವರು ಫೆಬ್ರವರಿ ತಿಂಗಳಲ್ಲೇ ಪಂಚಾಯತ್‌ಗೆ ಲಿಖಿತ ದೂರು ನೀಡಿದ್ದು, ಆದರೂ ಈ ಬಗ್ಗೆ ಪಂಚಾಯತ್ ಕ್ರಮ ವಹಿಸಿಲ್ಲ ಎಂದು ಆಪಾದಿಸಿದ್ದಾರೆ. ಪೈಪ್ ಒಡೆದು ನೀರು ಚರಂಡಿಯಲ್ಲಿ ಶೇಖರಣೆಯಾಗುತ್ತಿದೆ. ಇದರಲ್ಲಿ ನಾಯಿ, ಸಾಕು ಪ್ರಾಣಿಗಳೂ ಮಲಗಿ ನೀರು ಕಲುಷಿತಗೊಂಡಿದೆ. ಇಲ್ಲಿ ಶೇಖರಣೆಯಾಗುವ ನೀರು ಮತ್ತೆ ಪೈಪ್‌ಲೈನಿನೊಳಗೆ ಸೇರಿಕೊಳ್ಳುತ್ತಿದ್ದು, ಮನೆ ಮನೆ ನೀರಿನ ಸಂಪರ್ಕದ ಮೂಲಕ ಮತ್ತೆ ಮನೆಗೆ ಬರುತ್ತಿದೆ. ಇದನ್ನೇ ನಾವೂ ಸೇವಿಸುತ್ತಿದ್ದೇವೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ ಎಂದು ಅಲವತ್ತುಕೊಂಡಿದ್ದಾರೆ. ಈ ಹಿಂದೆ ಬೀದಿ ದೀಪ ಒಡೆದು ಹಾಕಿದ ಕೃತ್ಯ ನಡೆದಿತ್ತು. ಇದೀಗ ಅದು ಸರಿಯಾಗಿದ್ದು, ಈಗ ಚರಂಡಿ ಕೊಳಚೆ ನೀರಿನ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಕೊಳಚೆ ನೀರು ಚರಂಡಿಗೆ ಬಿಡದಂತೆ ನೋಟೀಸು ನೀಡಲಾಗಿದೆ. ದೂರುದಾರರ ಮನವಿಗೆ ಸ್ಪಂದಿಸಲಾಗಿದ್ದು ಸ್ಥಳ ವೀಕ್ಷಣೆ ಮಾಡಲಾಗಿದೆ. ಒಡೆದ ಪೈಪ್‌ಲೈನ್ ಕಾಂಕ್ರೀಟ್ ರಸ್ತೆಯ ಅಡಿಯಲ್ಲಿದೆ. ಅದನ್ನು ಈಗ ದುರಸ್ತಿ ಮಾಡಲು ಅಸಾಧ್ಯವಿದೆ. ಮುಂದಕ್ಕೆ ಹೊಸದಾಗಿ ಪೈಪ್‌ಲೈನ್ ಮಾಡಬೇಕಾಗಿದೆ. ಅಲ್ಲದೆ ದೂರುದಾರರು ತಮ್ಮ ಮನೆಯ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿದ್ದು ಅವರಿಗೆ ಸೂಚನೆ ನೀಡಲಾಗಿದೆ: ಇಂಮ್ತಿಯಾಝ್. ಪಿಡಿಒ ಗ್ರಾ.ಪಂ ಅಳದಂಗಡಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.